ಭಾರತ, ಏಪ್ರಿಲ್ 2 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 1ರ ಸಂಚಿಕೆಯಲ್ಲಿ ಲಲಿತಾದೇವಿ ಒತ್ತಾಯಕ್ಕೆ ಸುಬ್ಬು ವಿಧಿಯಿಲ್ಲದೇ ಶ್ರಾವಣಿ ಜೊತೆ ಸೇರಿ ಆಸ್ತಿ ಪತ್ರಕ್ಕೆ ಸಹಿ ಹಾಕುತ್ತಾನೆ. ಲಲಿತಾದೇವಿ ಪದೇ ಪದೇ ಸುಬ್ಬುವನ್ನು ಈ ಮನೆಯ ಉತ್ತರಾಧಿಕಾರಿ ಎನ್ನುವಾಗ ಅವನು 'ಅಮ್ಮ, ನೀವು ಹಾಗೆಲ್ಲಾ ಹೇಳಬೇಡಿ. ನಾನು ಈ ಮನೆಯ ಸೇವಕ, ನಿಮ್ಮೆಲ್ಲರ ಸೇವೆ ಮಾಡೋದೇ ನನ್ನ ಕೆಲಸ' ಎಂದು ಹೇಳುತ್ತಾನೆ. ಅದಕ್ಕೆ ಲಲಿತಾದೇವಿ 'ಆ ಕಾರಣಕ್ಕೆ ಕಣೋ ಸುಬ್ಬು ನೀನು ಇಷ್ಟ ಆಗೋದು. ವೀರು ಕೂಡ ನಿನ್ನ ಹಾಗೆ. ನನ್ನ ಯಜಮಾನರಿಗೆ ಪಿಎ ಆಗಿ ಬಂದವನು, ಆಮೇಲೆ ನನ್ನ ಮಗಳ ಗಂಡ ಆಗುತ್ತಾನೆ, ಈಗ ನೀನು ನನ್ನ ಅಳಿಯನಿಗೆ ಪಿಎ ಆಗಿ ಬಂದವನು, ಈಗ ನನ್ನ ಅಳಿಯನಿಗೆ ಅಳಿಯ ಆಗಿದ್ದೀಯಾ, ಕಾಲಚಕ್ರ ಅನ್ನೋದು ಇದಕ್ಕೆ' ಎನ್ನುತ್ತಾ ಸುಬ್ಬು ಈ ಮನೆಯ ಅಳಿಯ ಆಗಿದ್ದು, ತಮ್ಮ ಯಜಮಾನರು ಆಸ್ತಿಯನ್ನು ಶ್ರಾವಣಿ ಹೆಸರಿಗೆ ವಿಲ್ ಮಾಡಿಸಿದ್ದು, ಇದೆಲ್ಲಾ ವಿಧಿ ಇಚ್ಛೆ ಎನ್ನುವಂತೆ ಮಾತನಾಡುತ್ತಾರೆ.

ಸಹಿ ಎಲ್ಲಾ ಪಡೆದ...