ಭಾರತ, ಮಾರ್ಚ್ 29 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 28ರ ಸಂಚಿಕೆಯಲ್ಲಿ ಸುಬ್ಬು ಹಾಗೂ ಶ್ರಾವಣಿ ರೆಡಿಯಾಗಿ ಹಾಲ್‌ಗೆ ಬರುತ್ತಾರೆ. ಅತ್ತೆ-ಮಾವನಿಗೆ ಹೊರಡುತ್ತೇವೆ ಎಂದು ಹೇಳುವಾಗ ಶ್ರಾವಣಿ ಹಣೆಯಲ್ಲಿ ಕುಂಕುಮ ಇಲ್ಲದ್ದನ್ನು ಗಮನಿಸುತ್ತಾಳೆ ವಿಶಾಲಾಕ್ಷಿ. ಆದರೆ ಇದನ್ನು ನೇರವಾಗಿ ಸೊಸೆಗೆ ಹೇಳಲು ಸಾಧ್ಯವಾಗದೇ ಮಗಳನ್ನು ಕರೆದು 'ಲೇ ಧನ, ಎಲ್ಲಾದ್ರೂ ಹೊರಗಡೆ ಹೋಗುವಾಗ ಮುತ್ತೈದೆಯರು ಹಣೆಗೆ ಕುಂಕುಮ ಹಚ್ಚಿಕೊಂಡು ಹೋಗಬೇಕು ಅನ್ನೋದು ನಿಂಗೆ ಗೊತ್ತಾಗಲ್ವಾ, ಅದನ್ನೂ ನಾವೇ ಹೇಳಬೇಕಾ' ಎಂದು ಗದರಿಸುತ್ತಾಳೆ. ಆಗ ಶ್ರಾವಣಿಗೆ ತಾನು ಕುಂಕುಮ ಇಡದೇ ಇರುವುದು ನೆನಪಾಗುತ್ತದೆ. ಓಡಿ ಹೋಗಿ ಕುಂಕುಮ ಇಟ್ಟುಕೊಂಡು ಬಂದು ಅತ್ತೆ ಹಾಗೂ ಮಾವನಿಗೆ ಹೇಳಿ ಹೊರಡುತ್ತಾರೆ.

ಶ್ರಾವಣಿ-ಸುಬ್ಬು ಮನೆಯಿಂದ ಹೋಗುತ್ತಿದ್ದಂತೆ ಶಂಕೆ ವ್ಯಕ್ತಪಡಿಸುವ ಸುಂದರ ತಾಯಿಯ ಬಳಿ 'ಮಮ್ಮಿ ನೀನು ಪೇಪರ್‌ನಲ್ಲಿ ಓದಿದ ಹಾಗೆ, ಈ ಸುಬ್ಬು ಹಾಗೂ ಶ್ರಾವಣಿಯನ್ನು ಮರ್ಯಾದಾ ಹತ್ಯೆ ಮಾಡಲು ಕರೆಸಿರಬಹುದಾ' ಎಂ...