ಭಾರತ, ಫೆಬ್ರವರಿ 26 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 25ರ ಸಂಚಿಕೆಯಲ್ಲಿ ವರಲಕ್ಷ್ಮೀ ಮದುವೆ ಮಾಡಿಸಿದ್ರೆ ಮನೆಯವರೆಲ್ಲರೂ ಬದಲಾಗುತ್ತಾರೆ, ತನ್ನ ಮೇಲಿನ ಅವರ ಕೋಪ ಕಡಿಮೆಯಾಗುತ್ತದೆ ಎಂದು ಶ್ರಾವಣಿ ಅಂದುಕೊಂಡಿದ್ದಳು. ವರಲಕ್ಷ್ಮೀ ಮದುವೆಯಿಂದ ಎಲ್ಲರೂ ಸಂತೋಷಪಟ್ರು ಶ್ರಾವಣಿ ಮೇಲಿನ ಕೋಪ ಕಡಿಮೆಯಾಗಿರುವುದಿಲ್ಲ. ವರಲಕ್ಷ್ಮೀ ಮಾತ್ರ ಶ್ರಾವಣಿಯನ್ನು ಮನಸಾರೆ ಅತ್ತಿಗೆ ಎಂದು ಸ್ವೀಕರಿಸುತ್ತಾಳೆ. ಸುಬ್ಬು ಆದ್ರೂ ಬದಲಾಗಿರುತ್ತಾನೆ ಎಂದುಕೊಂಡು ಸುಬ್ಬು ಬಳಿ ನಾನು ಇಷ್ಟೆಲ್ಲಾ ಮಾಡಿದ್ರೂ ನೀನು ಖುಷಿಪಡ್ತಿಲ್ಲ ಅಲ್ವಾ ಅಂತ ಪ್ರಶ್ನೆ ಮಾಡ್ತಾಳೆ. ಆರಂಭದಲ್ಲಿ ಮಾತೇ ಆಡದ ಸುಬ್ಬು 'ಮೇಡಂ ನೀವು ಅಂದುಕೊಂಡಿರಬಹುದು, ವರಳ ಮದುವೆ ಮಾಡಿಸಿ ನೀವು ಮನೆಯವರೆಲ್ಲರ ಮನ ಗೆಲ್ಲಬಹುದು ಅಂತ. ಆದರೆ ಮದುವೆ ನಿಂತು ಹೋಗಿ ಎಲ್ಲರ ಎದುರು ಮನೆಯ ಮಾನ ಹೋಗಿತ್ತು, ಆದರೆ ಈಗ ನೀವು ಯಾರಿಗೂ ತಿಳಿಯದಂತೆ ಮದುವೆ ಮಾಡಿಸಿಕೊಂಡು ಬಂದ್ರಿ, ನಂಗೆ ಇರುವ ಒಬ್ಬ ತಂಗಿಯ ಮದುವೆಯನ್ನೂ ನೋಡಲು ಸಾಧ್ಯವಾಗಿಲ್ಲ. ಇದರಿಂದಲೇ ನೀವು ನನಗೆ ಹತ್ತಿರವ...