ಭಾರತ, ಏಪ್ರಿಲ್ 5 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 4ರ ಸಂಚಿಕೆಯಲ್ಲಿ ಸುಬ್ಬು ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಶುರುವಾಗಿರುತ್ತದೆ. ಬೆಳಗೆದ್ದು ಸ್ನಾನಕ್ಕೆಂದು ಹೊರಟ ಸುಬ್ಬುವನ್ನು ಅಡ್ಡಗಟ್ಟುವ ಶ್ರಾವಣಿ ತಾನೇ ಎಣ್ಣೆ ಹಚ್ಚುತ್ತೇನೆ ಎಂದು ಹೇಳಿ ತಡೆಯುತ್ತಾಳೆ. ಆದರೆ ಶ್ರಾವಣಿ ಮಾತಿಗೆ ಸುಬ್ಬು ಬೆಲೆ ಕೊಡೋದೇ ಇಲ್ಲ. ನೀವು ನನ್ನ ವಿಚಾರಕ್ಕೆ ಬರಬೇಡಿ ಎಂದು ಹಬ್ಬದ ದಿನವೂ ಶ್ರಾವಣಿಗೆ ವಾರ್ನಿಂಗ್ ಕೊಡುತ್ತಾನೆ. ಇತ್ತ ಮಗ- ಸೊಸೆ ಎಣ್ಣೆ ಹಚ್ಚುವ ವಿಚಾರಕ್ಕೆ ಜಗಳ ಮಾಡುತ್ತಿರುವುದು ನೋಡಿ ವಿಶಾಲಾಕ್ಷಿ ಏನು ಮಾಡಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾಳೆ. ಸುಬ್ಬು ಎಣ್ಣೆ ಹಚ್ಚಿಕೊಳ್ಳುವುದಿಲ್ಲ ಎಂಬ ಕೋಪಕ್ಕೆ ಶ್ರಾವಣಿ ಧರಣಿ ಮಾಡುತ್ತಾಳೆ. ಆದರೂ ಸುಬ್ಬು ಎಣ್ಣೆ ಹಚ್ಚಿಕೊಳ್ಳಲು ಒಪ್ಪುವುದಿಲ್ಲ. ಗಂಡ ಪದ್ಮನಾಭರ ಬಳಿ ಮಗ ಸೊಸೆ ವಿಚಾರ ಹೇಳಿದಾಗ ಅವರೊಂದು ಐಡಿಯಾ ಮಾಡುತ್ತಾರೆ.

ಸುಬ್ಬು ಹೇಗಾದರೂ ಸರಿ ಶ್ರಾವಣಿ ಕೈಯಿಂದ ಎಣ್ಣೆ ಹಚ್ಚಿಕೊಳ್ಳುವಂತೆ ಮಾಡಬ...