ಭಾರತ, ಫೆಬ್ರವರಿ 6 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 5ರ ಸಂಚಿಕೆಯಲ್ಲಿ ಬೆಳಿಗ್ಗೆ ಕೆಲಸಕ್ಕೆಂದು ರೆಡಿಯಾಗಿ ಹೊರಟ ಸುಬ್ಬುಗೆ ಮನೆಯಲ್ಲಿ ತಿಂಡಿ ಕೊಡುವವರೂ ಇರುವುದಿಲ್ಲ. ತಾಯಿ ವಿಶಾಲಾಕ್ಷಿಯೇ ಮಗನನ್ನು ವೈರಿಯನ್ನೇ ಕಾಣುತ್ತಿರುತ್ತಾರೆ. ಅಕ್ಕ ಧನಲಕ್ಷ್ಮೀ ಕೂಡ ಮಗಳಿಗೆ ಹಾಲು ಕೊಡಬೇಕು ಎಂದು ಹೇಳಿ ಜಾಗ ಖಾಲಿ ಮಾಡುತ್ತಾಳೆ. ಹೆಂಡತಿ, ಮಗಳ ವರ್ತನೆ ಪದ್ಮನಾಭ ಅವರಿಗೂ ಬೇಸರ ತರಿಸುತ್ತದೆ. ಅಮ್ಮ-ಅಕ್ಕ ನಡೆದುಕೊಂಡ ರೀತಿಯಿಂದ ಬೇಸರ ವ್ಯಕ್ತಪಡಿಸುವ ಸುಬ್ಬು ಅಪ್ಪನ ಬಳಿ 'ನಾನು ಹೊರಗಡೆ ತಿಂಡಿ ತಿಂದುಕೊಳ್ಳುತ್ತೇನೆ' ಎಂದು ಹೇಳಿ ಹೊರಡುತ್ತಾನೆ.

ಬೈಕ್‌ ಹತ್ತಿ ಹೊರಟ ಸುಬ್ಬುವಿಗೆ ಇಂದ್ರಮ್ಮ ಎದುರಾಗುತ್ತಾರೆ. ಸುಬ್ಬು ಮುಖ ನೋಡಿದ್ದೇ ತಡ ಕೋಪದಲ್ಲಿ ಕೂಗಾಡುವ ಇಂದ್ರಮ್ಮ, ಈಗ ಯಾರ ಮನೆ ಹಾಳು ಮಾಡಲು ಹೊರಟಿದ್ದೀಯಪ್ಪ. ನನ್ನ ಮಗಳನ್ನ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದೆ. ಈಗ ಯಾರ ಮನೆ ಹೆಣ್ಣುಮಗಳ ಭವಿಷ್ಯ ಹಾಳು ಮಾಡಲು ಹೊರಟಿದ್ದೀಯಾ. ಈಗಾಗಲೇ ಅದೆಷ್ಟು ಮನೆ ಹಾಳು ಮಾಡಿದ್ದೀಯಾ' ಅಂತೆಲ್ಲಾ ಕೂಗಾಡ...