ಭಾರತ, ಏಪ್ರಿಲ್ 11 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 10ರ ಸಂಚಿಕೆಯಲ್ಲಿ ಅಕ್ಕನಿಗೆ ನೀನಿನ್ನೂ ಹಳೆ ಕಾಲದವಳು, ನಿಂಗೆ ವಯಸ್ಸಾಗೋಕೆ ಶುರುವಾಗಿದೆ. ಈಗಿನ ಕಾಲದಲ್ಲಿ ಹನಿಮೂನ್‌ಗೆ ಹೋಗಿ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕೋದು ಕೂಡ ಪ್ರತಿಷ್ಠೆ. ನಿಂಗೆ ಇದೆಲ್ಲ ಗೊತ್ತಾಗಲ್ಲ ಅಂತಾಳೆ. ಅವಳ ಮಾತು ಕೇಳಿ ಪ್ರತಿಷ್ಠೆ, ಪ್ರಸ್ಟೀಜ್ ಅನ್ನೋದೆಲ್ಲ ತಲೆಗೆ ಬಂದಿದ್ದೆ ತಡ ಹನಿಮೂನ್‌ಗೆ ಕಳುಹಿಸಲು ಒಪ್ಪಿಗೆ ನೀಡುತ್ತಾರೆ ಇಂದ್ರಮ್ಮ. ಕೊನೆಗೂ ಇಂದ್ರಮ್ಮ ಹನಿಮೂನ್‌ಗೆ ಹೋಗಲು ಒಪ್ಪಿಗೆ ನೀಡಿದ್ದು ಎಲ್ಲರಿಗೂ ಖುಷಿ ಕೊಡುತ್ತದೆ. ಇದಕ್ಕೆ ಕಾರಣಳಾದ ಇಂದ್ರಮ್ಮನ ತಂಗಿ ಸರಸುಗೆ ಶ್ರಾವಣಿ ಥ್ಯಾಂಕ್ಸ್ ಹೇಳಿದ್ರೆ, ಸರಸು ಮಾತ್ರ ಮನಸ್ಸಲ್ಲೇ ಶ್ರಾವಣಿ ಆಸ್ತಿ ಲೆಕ್ಕಚಾರ ಮಾಡುತ್ತಿರುತ್ತಾಳೆ.

ಹನಿಮೂನ್‌ಗೆ ಹೋಗೋಕೆ ಬ್ಯಾಗ್ ರೆಡಿ ಮಾಡೋಕೆ ಅಂತ ಮೇಲಿರುವ ಬ್ಯಾಗ್ ತೆಗೆಯಲು ಹೋದಾಗ ಕಾಲು ಎಡವಿ ಬೀಳುವಂತಾಗುತ್ತಾಳೆ. ಆಗ ಓಡಿ ಬಂದು ಅವಳನ್ನು ಹಿಡಿಯುತ್ತಾನೆ ಸುಬ್ಬು. ಕ್ಷಣ ಹೊತ್ತು...