ಭಾರತ, ಫೆಬ್ರವರಿ 14 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 13ರ ಸಂಚಿಕೆಯಲ್ಲಿ ಮನೆಯ ಗೇಟ್ ಬಳಿ ಸುಬ್ಬುವನ್ನು ನೋಡಿದ ಮದನ್ ಉರಿದು ಬೀಳುತ್ತಾನೆ. ಸುಬ್ಬು ಮೇಲೆ ಕೈ ಮಾಡುವ ಅವನು 'ನಿನಗೂ ಈ ಸೆಕ್ಯೂರಿಟಿಗಳಿಗೂ ಬೇರೆ ವ್ಯತ್ಯಾಸವಿಲ್ಲ. ನೀನು ಅದ್ಹೇಗೆ ನಮ್ಮ ಶ್ರಾವಣಿಗೆ ತಾಳಿ ಕಟ್ಟಿದೆ. ಅವಳಿಗೆ ತಾಳಿ ಕಟ್ಟಿದ್ದು ಮಾತ್ರವಲ್ಲ ನನ್ನ ಆಸೆ, ಕನಸುಗಳನ್ನೆಲ್ಲಾ ಕೊಂದೆ' ಎಂದು ರೋಷ ವ್ಯಕ್ತಪಡಿಸುತ್ತಾನೆ. ಸೆಕ್ಯೂರಿಟಿಗಳು ತಡೆದರೂ ಕೇಳದ ಅವನು ಸುಬ್ಬುಗೆ 'ನನ್ನ ಕಣ್ಣ ಮುಂದೆ ನಿಲ್ಲಬೇಡ. ಇಲ್ಲೇ ಇದ್ದರೆ ನಿನ್ನನ್ನು ಸಾಯಿಸಿಬಿಡುತ್ತೇನೆ' ಎಂದು ಕೋಪದಲ್ಲಿ ಕೂಗಾಡುತ್ತಾನೆ. ಆದರೆ ಅವರ ಮಾತನ್ನು ಲೆಕ್ಕಿಸದೇ ಅಲ್ಲೇ ನಿಂತಿರುವ ಸುಬ್ಬುಗೆ ಕಾಲಿನಿಂದ ಒದೆಯಬೇಕು ಎಂದು ಕಾಲು ಎತ್ತುತ್ತಾನೆ ಮದನ್. ಆಗ ಅಲ್ಲಿಗೆ ಬರುವ ಲಲಿತಾದೇವಿ ಮದನ್‌ಗೆ ಜೋರು ಮಾಡುತ್ತಾರೆ.

ವರದನಿಗೂ ವರಲಕ್ಷ್ಮೀಗೂ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದ ಶ್ರಾವಣಿ ರಿಜಿಸ್ಟರ್ ಆಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಕೊಟ್ಟು ಸಿದ್ಧತೆ ಮಾಡಿಕೊಳ್ಳಲು ಹೇ...