ಭಾರತ, ಫೆಬ್ರವರಿ 15 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 14ರ ಸಂಚಿಕೆಯಲ್ಲಿ ಅತ್ತೆಯ ಬಳಿ 'ಅತ್ತೆ ನಂಗೆ ಸ್ವಲ್ಪ ಹೊರಗಡೆ ಕೆಲಸ ಇದೆ. ನಾನು ಹೊರಗಡೆ ಹೋಗಿ ಬರ್ತೀನಿ' ಎಂದು ಹೇಳುವ ಶ್ರಾವಣಿಯ ಮಾತು ಕೇಳಿಸಿಕೊಂಡ ವರಲಕ್ಷ್ಮೀ 'ನೀನು ಎಲ್ಲಿಗಾದ್ರೂ ಹೋಗು, ಮತ್ತೆ ಈ ಮನೆಗೆ ಬರೋಕೆ ಹೋಗಬೇಡ, ನೀನು ಬಂದಿಲ್ಲ ಅಂದ್ರೆ ಯಾರೂ ನಿನ್ನನ್ನು ಇಲ್ಲಿ ಕೇಳುವವರಿಲ್ಲ' ಎಂದು ಬಯ್ಯುತ್ತಾಳೆ. ಅದಕ್ಕೆ ಬೇಸರವಾದ್ರೂ ಸಮಾಧಾನದಿಂದಲೇ ಉತ್ತರ ಕೊಡುವ ಶ್ರಾವಣಿ 'ನಾನು ಎಲ್ಲಿಗೂ ಹೋಗುವುದಿಲ್ಲ. ಈಗ ಹೋಗಿ ಮತ್ತೆ ಬರ್ತೇನೆ. ಯಾಕೆಂದರೆ ಇದು ನನ್ನ ಗಂಡನ ಮನೆ' ಎಂದು ಹೇಳಿ ಹೊರಡು ನಿಲ್ಲುತ್ತಾಳೆ.

ವರದ-ವರಲಕ್ಷ್ಮೀ ಮದುವೆ ರಿಜಿಸ್ಟ್ರೇಷನ್‌ಗೆ ರಿಜಿಸ್ಟರ್ ಆಫೀಸ್‌ಗೆ ಹೋದ ಶ್ರಾವಣಿ ಸ್ವಲ್ಪ ದೂರ ನಡೆದು ಬರುವಷ್ಟರಲ್ಲಿ ಸುಸ್ತಾಗುತ್ತಾಳೆ. ಕ್ಯಾಬ್ ಬುಕ್ ಮಾಡಲು ಹೊರಟ ಅವಳಿಗೆ ಹಣದ ಚಿಂತೆ ಶುರುವಾಗಿ ಸ್ವಲ್ಪ ದೂರದಲ್ಲೇ ಇರುವ ಆಟೊದಲ್ಲಿ ಹೋಗೋಣ ಅಂದುಕೊಳ್ಳುತ್ತಾಳೆ. ಆಟೊ ನೋಡಿದ್ರೆ ಅದು ಪದ್ಮನಾಭ ಅವರದ್ದಾಗಿರುತ್ತದೆ. ಆಕೆಯನ್ನು ...