ಭಾರತ, ಮಾರ್ಚ್ 23 -- ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ 9 ತಿಂಗಳುಗಳ ಕಾಲ ಸಿಲುಕಿ ಮೊನ್ನೆಯಷ್ಟೇ ಭೂಮಿಗೆ ಬಂದಿದ್ದಾರೆ. ಬಾಹ್ಯಕಾಶ ನೌಕೆಯಲ್ಲಿ ತಾಂತ್ರಿಕ ದೋಷವು ಸುನಿತಾ ಹಾಗೂ ಸಹಯಾತ್ರಿ ವಿಲ್ಮೋರ್ ಬುಜ್ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯುವಂತಾಗಿತ್ತು. ಸುನಿತಾ ಬಗ್ಗೆ ಈಗ ಎಲ್ಲೆಲ್ಲೂ ಮಾತನಾಡುತ್ತಿದ್ದಾರೆ. ಆದರೆ ಸುನಿತಾ ವಿಲಿಯಮ್ಸ್‌ಗಿಂತಲೂ ಮೊದಲು ಒಬ್ಬ ವ್ಯಕ್ತಿ ಅಂತರಿಕ್ಷದಲ್ಲಿ ಸಿಲುಕಿದ್ದರು. ಆತ ಬ್ಯಾಹಾಕಾಶದಲ್ಲಿ ಪಟ್ಟ ಪಾಡು ನಿಜಕ್ಕೂ ಬೇಸರ ತರಿಸುತ್ತದೆ. ವಿಚಿತ್ರ ಎಂದರೆ ಆತ ಭೂಮಿಗೆ ಮರಳುವಷ್ಟರಲ್ಲಿ ದೇಶವೇ ಬದಲಾಗಿತ್ತು. ಆತನ ಕಥೆಯನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಮಧು ವೈಎನ್‌. ಅವರ ಬರಹವನ್ನು ನೀವು ಓದಿ.

ಸುನಿತಾ ವಿಲಿಯಮ್ಸ್‌ ಬಗ್ಗೆ ಅಗತ್ಯಕ್ಕಿಂತ ಹೆಚ್ಚೇ ಚರ್ಚೆಯಾಗಿದೆ. ಆಕೆಗಿಂತ ಆಸಕ್ತಿಕರ, ಕಷ್ಟಕರ, ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಇನ್ನೊಬ್ಬ ಗಗನಯಾನಿಯ ಕಥೆಯಿದೆ. ಸರ್ಜೆ ಕ್ರಿಕಲಾವ್‌ ಎಂದು ಹೆಸರು, ರಷ್ಯಾದವನು. ರಷ್ಯಾದವರು ಗಗನಯಾನಿಗಳನ್ನು ಆಸ್ಟ್ರಾನಟ್‌ ...