ಭಾರತ, ಏಪ್ರಿಲ್ 6 -- ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ISL 2025) ಬೆಂಗಳೂರು ಎಫ್‌ಸಿ ತಂಡವು ಫೈನಲ್‌ ಪ್ರವೇಶಿಸಿದೆ. ಎಫ್‌ಸಿ ಗೋವಾ (Bengaluru FC vs FC Goa) ವಿರುದ್ಧದ ಎರಡನೇ ಸೆಮಿಫೈನಲ್‌ ಪಂದ್ಯದ ಬಳಿಕ ಒಟ್ಟು ಗೋಲುಗಳ ಲೆಕ್ಕಚಾರದಲ್ಲಿ ಎದುರಾಳಿಯನ್ನು ಮಣಿಸಿದ ಬೆಂಗಳೂರು ಎಫ್‌ಸಿ ತಂಡವು ಐಎಸ್‌ಎಲ್ 2025ರ ಫೈನಲ್‌ನಲ್ಲಿ ಸ್ಥಾನ ಪಡೆದಿದೆ. ಸಾಕಷ್ಟು ನಾಟಕೀಯ ತಿರುವುಗಳನ್ನು ಕಂಡ ರೋಚಕ ಪಂದ್ಯದಲ್ಲಿ, ಕೊನೆಗೂ ಸುನಿಲ್‌ ಛೆಟ್ರಿ ಗಳಿಸಿದ ಆ ಒಂದು ಗೋಲಿನಿಂದಾಗಿ ಬೆಂಗಳೂರು ಎಫ್‌ಸಿ ಅಭಿಮಾನಿಗಳು ಗೆಲುವಿನ ಸಿಹಿ ಉಂಡಿದ್ದಾರೆ. ತಂಡಕ್ಕೆ ಈಗ ಐಎಸ್‌ಎಲ್‌ ಟ್ರೋಫಿ ಗೆಲುವಿಗೆ ಫೈನಲ್‌ ಗೆಲುವಿನ ಅಗತ್ಯವಿದೆ.

ಭಾನುವಾರ (ಏ.6) ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವು ಎಫ್‌ಸಿ ಗೋವಾವನ್ನು ಒಟ್ಟು 3-2 ಗೋಲುಗಳ ಅಂತರದಿಂದ ಸೋಲಿಸಿ ಐಎಸ್‌ಎಲ್‌ನ ಫೈನಲ್‌ ಸ್ಥಾನವನ್ನು ಕಾಯ್ದಿರಿಸಿಕೊಂಡಿತು.

ಇಂದು ನಡೆದ ಪಂದ್ಯದ ಕೊನೆಯಲ್ಲಿ ಗೋವಾ ತಂಡವು 2-0 ಗೋಲುಗಳ ಮುನ್ನಡೆ ಸಾಧಿಸಿತು. ಇದರೊಂದಿಗೆ ಪಂದ್ಯ...