ಭಾರತ, ಮಾರ್ಚ್ 10 -- ಪಾಕಿಸ್ತಾನ ತಂಡವು ಭಾರತದ ಬಿ ತಂಡವನ್ನೂ ಸೋಲಿಸಲು ಸಾಧ್ಯವಿಲ್ಲ ಎಂಬ ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಅವರ ಹೇಳಿಕೆಗೆ ಪಾಕಿಸ್ತಾನದ ಶ್ರೇಷ್ಠ ಆಟಗಾರ ಇಂಜಮಾಮ್-ಉಲ್-ಹಕ್ ತೀವ್ರವಾಗಿ ಪ್ರತಿಕ್ರಿಯಿಸಿ ಕೆಂಡಾಮಂಡಲರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ 6 ವಿಕೆಟ್​ಗಳಿಂದ ಭಾರತ ತಂಡ ಗೆದ್ದ ನಂತರ ಉಭಯ ರಾಷ್ಟ್ರಗಳು ಆಡುವ ಕ್ರಿಕೆಟ್​ನ ಗುಣಮಟ್ಟದ ದೊಡ್ಡ ಅಂತರವನ್ನು ಎತ್ತಿ ತೋರಿಸಿದ್ದ ಗವಾಸ್ಕರ್, ಇತ್ತೀಚೆಗೆ ಪಾಕ್ ತಂಡವನ್ನು ಟೀಕಿಸಿದ್ದರು.

ಮೊಹಮ್ಮದ್ ರಿಜ್ವಾನ್ ಮತ್ತು ಪಾಕಿಸ್ತಾನ ತಂಡದ ಪ್ರದರ್ಶನವನ್ನು ಬಹಿರಂಗವಾಗಿ ಟೀಕಿಸಿದ್ದ ಇಂಜಮಾಮ್, ಗವಾಸ್ಕರ್ ಅವರ ಇತ್ತೀಚಿನ ಹೇಳಿಕೆಗಳನ್ನು ಖಂಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಇತಿಹಾಸದ ಬಗ್ಗೆ ಆಳವಾಗಿ ಪ್ರತಿಬಿಂಬಿಸುವಂತೆ ಗವಾಸ್ಕರ್ ಅವರಿಗೆ ಕರೆ ನೀಡಿದ ಇಂಜಮಾಮ್, ಉಭಯ ತಂಡಗಳ ನಡುವಿನ ಅಂಕಿ-ಅಂಶಗಳನ್ನು ಗಮನಿಸುವಂತೆ ಸೂಚಿಸುದ್ದಾರೆ. ಅಲ್ಲದೆ, ಉದ್ದೇಶ ಪೂರ್ವಕವಾಗಿ ಆಡಲು ಪಲಾಯನ ಮಾಡಲಾಗಿತ್ತು ಎಂದು ಗವಾಸ...