Bengaluru, ಏಪ್ರಿಲ್ 25 -- ಪ್ರಪಂಚದಲ್ಲಿ ಕ್ರೈಸ್ತಧರ್ಮ ಬಹುದೊಡ್ಡ ಧರ್ಮವಾಗಿದೆ. ಈ ಧರ್ಮದ ಮೂಲ ಪುರುಷ ಸ್ವಯಂ ಯೇಸುಕ್ರಿಸ್ತ. ಆತನ ನಂತರ ಕ್ರಿಸ್ತನೇ ಆರಿಸಿದ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬನಾದ ಬೆಸ್ತ ಕುಲದ ಶ್ರೀಸಾಮಾನ್ಯ ಪೇತ್ರ ಎಂಬುವವನು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡಿದ. ಈ ಕಾರಣದಿಂದ ಆತ ಧರ್ಮಸಭೆ ಎಂಬ ಚರ್ಚ್‌ನ ಮೊದಲ ಪೋಪ್‌ ಆಗಿ ನೇಮಿತನಾದ. ಇಲ್ಲಿಯವರೆಗೆ ಕ್ಯಾಥೋಲಿಕ್‌ ಧರ್ಮಸಭೆಯನ್ನು 266 ಜನ ಪೋಪ್‌ರು ಕಟ್ಟಿ ಬೆಳೆಸಿದ್ದಾರೆ. ಇಡೀ ಪ್ರಪಂಚಕ್ಕೆ ಇವರು ಕ್ರೈಸ್ತ ಧರ್ಮವನ್ನು ಕುರಿತು ಉಪದೇಶವನ್ನು ನೀಡುವರು. ಪೇತ್ರನ ಸಾಲಿನಲ್ಲಿ ಬರುವವರೇ ಪೋಪ್‌ ಜಗದ್ಗುರುಗಳು. ಇವರೆಲ್ಲರು ತಮ್ಮ ಪ್ರಾಣದ ಹಂಗು ತೊರೆದು ಸಾರ್ವತ್ರಿಕ ಧರ್ಮಸಭೆಯನ್ನು (Universal Church) ಕಣ್ಗಾವಲಾಗಿ ಕಂಡಿದ್ದಾರೆ. ಇವರ ವಾಸಸ್ಥಳ ರೋಮ್‌ಗೆ ಅಂಟಿಕೊಂಡಿರುವ ವ್ಯಾಟಿಕನ್‌ ನಗರ. ಇದು ಒಂದು ಸಣ್ಣ ಸ್ವತಂತ್ರ ದೇಶವಾಗಿದೆ. ಪೋಪ್‌ ಈ ನಗರದ ಮುಖ್ಯಸ್ಥ.

ಇಲ್ಲಿಂದಲೇ ಪ್ರಪಂಚದ ಕ್ಯಾಥೋಲಿಕ್‌ ಕ್ರೈಸ್ತರ ಆಧ್ಯಾತ್ಮ ವಿಚಾರಗಳನ್ನು ನೋಡಿಕೊಳ...