ಭಾರತ, ಏಪ್ರಿಲ್ 30 -- ಮೇ 1 ಕಾರ್ಮಿಕರ ದಿನಾಚರಣೆ. ಶುಕ್ರವಾರ ರಜೆ (ಮೇ 2) ಹಾಕಿಕೊಂಡರೆ ಮತ್ತೆ ಶನಿವಾರ (ಮೇ 3), ಭಾನುವಾರ (ಮೇ 4) ಮಾಮೂಲಿ ರಜೆ. ಜೊತೆಗೆ ಬೇಸಿಗೆ ರಜಾ ದಿನಗಳು. ಶಾಲಾ ಕಾಲೇಜುಗಳಿಗೆ ಸುದೀರ್ಘ ರಜೆ ಇರುವ ಕಾರಣಕ್ಕೆ ಬಹುತೇಕ ಕುಟುಂಬಗಳು ಪ್ರವಾಸಕ್ಕೆ ಹೊರಟು ಬಿಡುತ್ತಾರೆ. ಪ್ರವಾಸ ಎಲ್ಲಿಗೆ ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ವಿದೇಶ ಪ್ರವಾಸ, ಹೊರ ರಾಜ್ಯ, ಉತ್ತರ ಭಾರತ ಹೀಗೆ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಂದಿಷ್ಟು ಮಂದಿ ಹೇಳಿದ್ದಿಷ್ಟು!

ಸಾಮಾನ್ಯವಾಗಿ ಬೇಸಿಗೆಯಾಗಿರುವ ಕಾರಣಕ್ಕೆ ಗಿರಿಧಾಮ, ಕರಾವಳಿ ಅಥವಾ ತಣ್ಣನೆಯ ಅನುಭವ ನೀಡುವ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳುವುದು ವಾಡಿಕೆ. ಇಲ್ಲೊಬ್ಬರು ತಮ್ಮ ನಿವೃತ್ತ ಸರ್ಕಾರಿ ನೌಕರರಾಗಿರುವ ಪೋಷಕರೊಂದಿಗೆ ನೇಪಾಳ ಪ್ರವಾಸ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಒಂದೆರಡು ತಿಂಗಳ ಹಿಂದೆಯೇ ಸಿದ್ದತೆ ಆರಂಭಿಸಿದ್ದಾರೆ. ಯಾವ ಸ್ಥಳಗಳನ್ನು ನೋಡಬೇಕು ಎಂದು ಪಟ್ಟಿಯನ್ನೂ ಮಾಡಿಕೊಂಡಿದ...