Bangalore, ಮೇ 9 -- ಒಂದೆಡೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದೆ. ಆಪರೇಷನ್‌ ಸಿಂಧೂರದ ಮೂಲಕ ಪಾಕಿಸ್ತಾನದ ವಿರುದ್ಧ ಭಾರತ ಸಮರ ಸಾರಿದೆ. ಈ ಸಮಯದಲ್ಲಿ ಸ್ಯಾಂಡಲ್‌ವುಡ್‌ನ ಕೆಲವೊಂದು ಸಿನಿಮಾಗಳನ್ನು ನೆನಪಿಸಿಕೊಳ್ಳಬಹುದು. ಕನ್ನಡ ಚಿತ್ರರಂಗದಲ್ಲಿ ಆರಂಭದ ಕಾಲದಿಂದ ಈಗಿನವರೆಗೆ ಹಲವು ನಟರು ಯೋಧರ ಉಡುಗೆಯಲ್ಲಿ ದೇಶಭಕ್ತಿಯಿಂದ ನಟಿಸಿದ್ದಾಎರೆ. ಸಾಹಸ ಸಿಂಹ ವಿಷ್ಣುವರ್ಧನ್‌ ಸೇರಿದಂತೆ ಹಲವು ನಟರು ಸೈನಿಕರಾಗಿ ನಟಿಸಿದ್ದಾರೆ. ರವಿಚಂದ್ರನ್‌, ಶಿವರಾಜಕುಮಾರ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌, ವಿಕ್ಕಿ ವರುಣ್‌ ಸೇರಿದಂತೆ ಹಲವು ನಟರು ಸೈನಿಕನಾಗಿ ತೆರೆಮೇಲೆ ಶತ್ರುಸಂಹಾರ ಮಾಡಿದ್ದಾರೆ. ಭಾರತದ ಸೇನೆಯು ಆಪರೇಷನ್‌ ಸಿಂಧೂರದ ಮೂಲಕ ಪಾಕಿಸ್ತಾನದ ವಿರುದ್ಧ ಮತ್ತು ಉಗ್ರರ ವಿರುದ್ಧ ತೊಡೆ ತಟ್ಟಿರುವ ಸಮಯದಲ್ಲಿ ಈ ಸಿನಿಮಾಗಳು ದೇಶಭಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು.

ಮಾಸ್‌ ಲೀಡರ್‌: 2017ರ ಆಕ್ಷನ್‌ ಸಿನಿಮಾ ಮಾಸ್‌ ಲೀಡರ್‌ಗೆ ನಿರ್ದೇಶಕ ನರಸಿಂಹ ಆಕ್ಷನ್‌ ಕಟ್‌ ಹೇಳಿದ್ದರು. ಶಿವಣ್ಣ ಈ ಸಿನಿಮ...