ಭಾರತ, ಮೇ 24 -- ಜೂನ್ 20ರಿಂದ ಶುರುವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತದ ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ನಿವೃತ್ತಿಯ ನಂತರ ಇದು ಭಾರತ ಮೊದಲ ಟೆಸ್ಟ್ ಸರಣಿಯಾಗಿದೆ. ಮೇ 7, ಮೇ 12ರಂದು ಕ್ರಮವಾಗಿ ಈ ಸೂಪರ್ ಸ್ಟಾರ್ ಜೋಡಿ ಟೆಸ್ಟ್​​​​ ಕ್ರಿಕೆಟ್​​ನಿಂದ ಹಿಂದೆ ಸರಿದಿದ್ದರು. ರೋಹಿತ್​ ಶರ್ಮಾ ಸ್ಥಾನಕ್ಕೆ ಬದಲಿಯಾಗಿ ಯುವ ಆಟಗಾರ ಶುಭ್ಮನ್ ಗಿಲ್ ಅವರನ್ನು ಟೆಸ್ಟ್ ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿದೆ. ರಿಷಭ್ ಪಂತ್​ಗೆ ವೈಸ್ ಉಪನಾಯಕತ್ವ ನೀಡಲಾಗಿದೆ. ಹಾಗಿದ್ದರೆ ಮೊದಲ ಟೆಸ್ಟ್​​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್​ 11 ಹೇಗಿರಲಿದೆ ಎನ್ನುವುದನ್ನು ಮುಂದೆ ತಿಳಿಯೋಣ.

ಮಹತ್ವದ ಸರಣಿಗೆ ಭಾರತ ತಂಡದಲ್ಲಿ ನಾಲ್ವರ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಒಬ್ಬರ ಸ್ಥಾನ ಖಚಿತವಾಗಿದೆ. ಯಶಸ್ವಿ ಜೈಸ್ವಾಲ್ ಈಗಾಗಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ ಇವರ ಜೊತೆಗೆ ಇನ್ನಿಂಗ್ಸ್​​ ಆರಂಭಿಸಲು ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ ಮತ್ತ...