Bangalore, ಏಪ್ರಿಲ್ 23 -- ಕಳೆದ ವರ್ಷವಷ್ಟೇ ಪೆಹಲ್ಗಾಮಿನ ಮೂಲೆ ಮೂಲೆಯನ್ನೂ ಬಿಡದೇ ಓಡಾಡಿದ್ದೆ. ಪೋನಿ ಹತ್ತಿ ಆ ಜಾಗಕ್ಕೆ ಹೋಗಿದ್ದೆ. ಪ್ರವಾಸಿಗರನ್ನು ಗುರಿಯಾಗಿಸಿರುವುದು ತೀರ ಅನ್ಯಾಯ ಮತ್ತು ದುರದೃಷ್ಟಕರ ಬೆಳವಣಿಗೆ. ಮಡಿದವರಲ್ಲಿ ಕನ್ನಡಿಗರೂ ಸೇರಿರುವುದು ಇನ್ನಷ್ಟು ಖೇದಕರ.

ನನ್ನ ಅಂದಿನ ಕಾಶ್ಮೀರದ ಕುರಿತಾದ ಬರಹದಲ್ಲಿ ಕಾಶ್ಮೀರ ಭಯಮುಕ್ತವೇ ಅನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಇರಲಿಲ್ಲ. ಈಗ ಸಿಕ್ಕಿದೆ.

ಕಾಶ್ಮೀರಕ್ಕೆ ಹೋಗಬೇಕೆಂಬ ತುಡಿತವೇನೋ ಬಹಳ ವರ್ಷಗಳಿಂದ ಮನೆಮಾಡಿತ್ತು. ವಿಚಾರಿಸಿದಾಗಲೆಲ್ಲ ಪರಸ್ಪರ ವಿರುದ್ಧವಾದ ವರದಿಗಳೇ ಸಿಗುತ್ತಿದ್ದವು. ಒಂದು ಕಾಶ್ಮೀರದಂತಹ ಸ್ವರ್ಗ ಇನ್ನೊಂದಿಲ್ಲವೆಂದು ಹೇಳಿದರೆ, ಇನ್ನೊಂದು ಕಾಶ್ಮೀರ ತುಂಬ ಅಪಾಯಕಾರಿ ಜಾಗ ಅನ್ನುತ್ತಿತ್ತು. ನನಗೋ ಮನದ ಮೂಲೆಯಲ್ಲಿ ನಿಜವಾದ ಕಾಶ್ಮೀರ ಇವೆರಡೂ ವಾದ ಪ್ರತಿವಾದಗಳಿಗಿಂತ ಭಿನ್ನವೇ ಇರಬೇಕು ಅನ್ನಿಸಿತ್ತು. ಕೊನೆಗೂ ಹತ್ತು ದಿನಗಳ ಪ್ರವಾಸ ನಿಜವಾದ ಕಾಶ್ಮೀರವನ್ನು ಸ್ವಲ್ಪ ಸ್ವಲ್ಪವಾಗಿ ತೋರಿಸಿತು. ಅಲ್ಲಿ ಯಾವ ಏಕಪಕ್ಷೀಯ ವೈಪರೀತ...