ಭಾರತ, ಫೆಬ್ರವರಿ 26 -- ಶನಿಗ್ರಹ ಎಂದಾಕ್ಷಣ ನಮ್ಮಲ್ಲಿ ಒಂದು ರೀತಿಯ ಭಯ ಉಂಟಾಗುತ್ತದೆ. ಆದರೆ ಶನಿಗ್ರಹದಿಂದ ಕೇವಲ ಕೆಟ್ಟಫಲಗಳು ದೊರೆಯುವುದಿಲ್ಲ. ಪಂಚ ಮಹಾಪುರುಷಯೋಗಗಳಲ್ಲಿ ಒಂದಾದ ಶಶಯೋಗವು ಉಂಟಾಗುವುದೇ ಶನಿಗ್ರಹದಿಂದ. ಜೋತಿಷ್ಯದ ಪುಸ್ತಕಗಳಲ್ಲಿ ಶುಭಫಲಗಳು ಮತ್ತು ಅಶುಭಫಲಗಳನ್ನು ನೀಡಿರುತ್ತಾರೆ. ಆದರೆ ಕುಂಡಲಿಯಲ್ಲಿನ ಶನಿಗ್ರಹದ ಬಲಾಬಲಗಳನ್ನು ಅರಿತು ಫಲಗಳನ್ನು ತಿಳಿಯಬೇಕು. ಶನಿಯಯಂತ್ರವನ್ನು ಪ್ರತಿಯೊಬ್ಬರೂ ಪೂಜಿಸಬಹುದು. ಆದರೆ ಶನಿಯಂತ್ರವನ್ನು ಧರಿಸುವ ಮುನ್ನ ಯಂತ್ರಗಳ ಬಗ್ಗೆ ತಿಳುವಳಿಕೆ ಇರುವವರ ಸಲಹೆಯನ್ನು ಪಡೆಯುವುದು ಬಹುಮುಖ್ಯ. ಶನಿಯಂತ್ರವನ್ನು ಪೂಜಿಸುವುದಾಗಲಿ ಅಥವಾ ಧರಿಸುವುದಾಗಲಿ ಮಾಡಿದಲ್ಲಿ ಶನಿವಾರಗಳಂದು ಶ್ರೀಆಂಜನೇಯಸ್ವಾಮಿ ಅಥವಾ ಸೋಮವಾರದಂದು ಶೀಪಾರ್ವತಿಪರಮೇಶ್ವರರ ದೇವಾಲಯಕ್ಕೆ ಭೇಟಿ ನೀಡುವುದು ಒಳ್ಳೆಯದು.

ಮೇಷ ಲಗ್ನ ಅಥವಾ ಮೇಷ ರಾಶಿಯಲ್ಲಿ ಜನಿಸಿದವರು ಶನಿಯ ಯಂತ್ರವನ್ನು ಪೂಜಿಸಬಹುದು. ಆದರೆ ಅವರ ಜನ್ಮ ಕುಂಡಲಿಯಲ್ಲಿ ಶನಿಯು ತುಲಾ, ಮಕರ ಅಥವಾ ಕುಂಭ ರಾಶಿಗಳಲ್ಲಿ ಸ್ಥಿತನಾಗಿರಬೇಕು. ಇದರ...