ಭಾರತ, ಮೇ 5 -- ಬಿಡುಗಡೆಗೆ ಅಣಿಯಾಗಿರುವ 'ಸೀಸ್ ಕಡ್ಡಿ' ಚಿತ್ರದ ಅರ್ಥವತ್ತಾದ ವೀಡಿಯೋ ಸಾಂಗ್ ಒಂದು ಬಿಡುಗಡೆಗೊಂಡಿದೆ. ಈ ಮೂಲಕ ರತನ್ ಗಂಗಾಧರ್ ನಿರ್ದೇಶನದ ಈ ಚಿತ್ರ ಬಿಡುಗಡೆಯ ಅಂಚಿನಲ್ಲಿ ಒಂದಷ್ಟು ಚರ್ಚೆ ಹುಟ್ಟುಹಾಕಿದೆ. ಹಾಡೆಂಬುದು ಹೆಚ್ಚಿನ ಸಂದರ್ಭದಲ್ಲಿ ರೋಮಾಂಚನ ಮೂಡಿಸೋ ಮನೋರಂಜನೆಯ ವಾಹಕವಾಗಿಯಷ್ಟೇ ಸಿನಿಮಾಗಳಲ್ಲಿ ಬಳಕೆಯಾಗೋದಿದೆ. ಆದರೆ, ವಿರಳ ಸಂದರ್ಭಗಳಲ್ಲಿ ಮಾತ್ರ ಒಟ್ಟಾರೆ ಕಥೆಯ ಆತ್ಮವನ್ನೇ ಬಚ್ಚಿಟ್ಟುಕೊಂಡಂಥ, ಕೇಳಿದಾಕ್ಷಣವೇ ಆಲೋಚನೆಗೆ ಹಚ್ಚುವಂಥಾ ಹಾಡುಗಳು ಸೃಷ್ಟಿಯಾಗೋದೂ ಇದೆ. ಇದೀಗ ಬಿಡುಗಡೆಗೊಂಡಿರುವ ಸೀಸ್ ಕಡ್ಡಿಯ ವೀಡಿಯೋ ಸಾಂಗ್ ನಿಸ್ಸಂದೇಹವಾಗಿಯೂ ಆ ಸಾಲಿಗೆ ಸೇರಿಕೊಳ್ಳುವಂತಿದೆ.

ಭೇದವು ಎಲ್ಲಿದೆ, ಬೀಳುವ ಮಳೆಗೆ

ಕಾಗದ ಅಂಜಿದೆ, ನಾಣ್ಯವು ಆಡಿದೆ

ಓಡುವ ಕಾಲಕೆ ಗೋಡೆಯು ಎಲ್ಲಿದೆ

ಸಾಗದೆ ಕೂತರೆ, ಸಾಗುವೆ ಎಲ್ಲಿಗೆ

ಬಾರದ ನಿನ್ನೆಗೆ, ಕಾಣದ ನಾಳೆಗೆ

ಈ ಕ್ಷಣ ಮರೆತೆ, ಹೋದರೆ ಹೇಗೆ

ನಿನ್ನಲೇ ಖುಷಿಯೂ ಅಡಗಿದೆ

ಯಾರ್ಯಾಕೆ ಬರಬೇಕು, ನೀ ನಂಬು ನಿನ್ನನ್ನೇ

ಕೈಯೆತ್ತಿ ಮುಗಿಯೋದು, ಕಾಲ್...