Bengaluru, ಮಾರ್ಚ್ 17 -- ಮದುವೆ ಅಥವಾ ಇನ್ನಿತರೆ ಶುಭಸಮಾರಂಭಕ್ಕೆ ಹೊರಟಾಗ ಹೆಂಗಳೆಯರು ಸೀರೆ ಧರಿಸುವಾಗ ಸಾಕಷ್ಟು ಸಿದ್ಧತೆ ಕೈಗೊಳ್ಳುವುದು ಮಾಮೂಲಿ. ಸೀರೆ ಉಡುವ ಮುನ್ನ ಸರಿಯಾದ ರವಿಕೆ, ಬಳೆಗಳು, ಆಭರಣಗಳು, ನೈಲ್ ಪಾಲಿಶ್ ಇತ್ಯಾದಿಗಳನ್ನು ಮುಂಚಿತವಾಗಿ ಸಿದ್ಧಗೊಳಿಸುತ್ತಾರೆ. ಆದರೆ, ಚಪ್ಪಲಿಗಳ ವಿಷಯಕ್ಕೆ ಬಂದಾಗ, ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ. ಅನೇಕ ಮಹಿಳೆಯರು ಚಪ್ಪಲಿಗಳ ಬಗ್ಗೆ ಅಜಾಗರೂಕರಾಗಿರುತ್ತಾರೆ. ಸೀರೆ ಧರಿಸಿರುವುದರಿಂದ ಕಾಲು ಗೋಚರಿಸುವುದೇ ಇಲ್ಲ. ಹೀಗಾಗಿ ಅವರು ಹೆಚ್ಚು ಗಮನ ಹರಿಸುವುದಿಲ್ಲ. ಆದರೆ, ಇದು ಅನೇಕ ಜನರು ಮಾಡುತ್ತಿರುವ ತಪ್ಪು.

ಸೀರೆ ಉಟ್ಟಾಗ ಪಾದರಕ್ಷೆಗಳ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಕುಳಿತುಕೊಳ್ಳುವಾಗ, ನಡೆಯುವಾಗ, ವಾಹನದಿಂದ ಇಳಿಯುವಾಗ, ನೀವು ಧರಿಸುವ ಚಪ್ಪಲಿಗಳು ನಿಮ್ಮ ಘನತೆಯನ್ನು ಪ್ರತಿಬಿಂಬಿಸುತ್ತವೆ. ಇದು ನಿಮ್ಮ ಒಟ್ಟಾರೆ ನೋಟವನ್ನು ಸುಂದರಗೊಳಿಸುವಲಿ ಚಪ್ಪಲಿಗಳು ಪ್ರಮುಖ ಪಾತ್ರವಹಿಸುತ್ತವೆ. ನೀವು ಸರಿಯಾದ ಪಾದರಕ್ಷೆಗಳನ್ನು ಧರಿಸದಿದ್ದರೆ, ನಿಮ್ಮ ಸೀರೆಯ ನೋ...