Bengaluru, ಏಪ್ರಿಲ್ 14 -- ಹಬ್ಬ, ಮದುವೆ ಇತ್ಯಾದಿ ಶುಭ ಸಮಾರಂಭಕ್ಕೆ ಮಹಿಳೆಯರು ಸೀರೆ ಉಡಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ, ಯುವ ಪೀಳಿಗೆಯಲ್ಲಿ ಸೀರೆ ಉಡುವ ಕ್ರೇಜ್ ಕೂಡ ಹೆಚ್ಚಾಗುತ್ತಿದೆ. ಆದರೆ, ಬ್ಲೌಸ್‌ಗಳ ವಿನ್ಯಾಸದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸೀರೆಯ ಜೊತೆಗೆ ರವಿಕೆ ವಿನ್ಯಾಸ ಇತ್ತೀಚೆಗೆ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ. ಸೀರೆ ಸರಳವಾಗಿದ್ದರೂ ರವಿಕೆಯನ್ನು ವಿಶಿಷ್ಟವಾಗಿ ಹೊಲಿಸಿದರೆ, ಸೀರೆಯುಟ್ಟಾಗ ಆಕರ್ಷಕವಾಗಿ ಕಾಣುವಿರಿ. ಇಲ್ಲಿವೆ ಕುಪ್ಪಸ ವಿನ್ಯಾಸ:

ಕಾಲೇಜು ಅಥವಾ ಕಚೇರಿಯಲ್ಲಿ ಫಾರ್ಮಲ್ ಲುಕ್‌ಗಾಗಿ ನೀವು ಸೀರೆ ಉಡಲು ಬಯಸಿದರೆ, ಈ ರೀತಿ ಹೊಲಿಯಲಾದ ವೇಸ್ಟ್‌ಕೋಟ್ ವಿನ್ಯಾಸದ ಬ್ಲೌಸ್ ಅನ್ನು ಪಡೆಯಬಹುದು. ಅಥವಾ ಸೀರೆಯನ್ನು ವೇಸ್ಟ್‌ಕೋಟ್ ವಿನ್ಯಾಸದ ಟಾಪ್‌ನೊಂದಿಗೆ ಹೊಂದಿಸಬಹುದು.

ಈ ಬ್ಲೌಸ್ ವಿನ್ಯಾಸವು ಸಂಪೂರ್ಣವಾಗಿ ವಿಶಿಷ್ಟವಾಗಿದ್ದು, ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಸ್ಟ್ರಾಪಿ ಬ್ಲೌಸ್‌ನ ಮಧ್ಯಭಾಗದಲ್ಲಿರುವ ಕಾಲರ್ ವಿನ್ಯಾಸವು ತುಂಬಾ ವಿಶಿಷ್...