Bangalore, ಮೇ 24 -- ನಿವೇದಿತಾ ಗೌಡ ತನ್ನ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯುಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಈ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೆ ಇದು ಸೋಷಿಯಲ್‌ ಮೀಡಿಯಾದಲ್ಲಿ ಬ್ರ್ಯಾಂಡ್‌ ಪ್ರಚಾರಕ್ಕೆ ಮಾಡಿರುವ ಫೋಟೋಶೂಟ್‌. ಹೀಗಿದ್ದರೂ, ಜನರು ನೀವು ಸೀರೆಯಲ್ಲಿ ಸಖತ್‌ ಕಾಣಿಸುವಿರಿ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಇವರಿಗೆ ಮೊಸುಮಿಲಿಯಾ ಸ್ಟೈಲಿಂಗ್‌ ಮಾಡಿದ್ದಾರೆ. ಮಾಯಾ ಡಿಸೈನರ್‌ ಸ್ಟುಡಿಯೋದಿಂದ ಔಟ್‌ಫಿಟ್‌ ಪಡೆದಿದ್ದಾರೆ. ಚೇತನ್‌ಗೌಡ ಮೇಕಪ್‌ ಮಾಡಿದ್ದಾರೆ.

ಸಣ್ಣ ಬಟ್ಟೆಗಳಲ್ಲಿ ಫೋಟೋ ಶೂಟ್‌, ರೀಲ್ಸ್‌ ಮಾಡುತ್ತಿದ್ದ ನಿವೇದಿತಾ ಗೌಡರಿಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಕೆಟ್ಟ ಅನುಭವವಾಗಿದೆ. ಇವರ ಫೋಟೋ ವಿಡಿಯೋಗಳಿಗೆ ಜನರು ನಾನಾ ರೀತಿ ಕೆಟ್ಟದ್ದಾಗಿ ಕಾಮೆಂಟ್‌ ಮಾಡುತ್ತಿದ್ದರು.

ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ಗಳು, ಡಿಜಿಟಲ್‌ ಕಿರುಕುಳಗಳ ಬಗ್ಗೆ ಮೌನವಾಗಿದ್ದ ನಿವೇದಿತಾ ಗೌಡ ತನ್ನ ಸಿನಿಮಾ ನಟನೆಯನ್ನೂ ಮುಂದುವ...