ಭಾರತ, ಏಪ್ರಿಲ್ 12 -- ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವಧು ಧಾರಾವಾಹಿ ನಾಯಕಿ ದುರ್ಗಾಶ್ರೀ ಕನ್ನಡ ಕಿರುತೆರೆಯಲ್ಲಿ ಮಿಂಚಿ ನಂತರ ತೆಲುಗು ಕಿರುತೆರೆಯಲ್ಲಿ ಹೆಸರು ಮಾಡಿದವರು. ಇವರು ಉದಯ ಟಿವಿಯಲ್ಲಿ ಪ್ರಸಾರವಾದ 'ನೇತ್ರಾವತಿ' ಧಾರಾವಾಹಿ ಮೂಲಕ ತಮ್ಮ ಕಿರುತೆರೆ ಪಯಣ ಆರಂಭಿಸುತ್ತಾರೆ.

ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡುವ ಇವರು 'ಕೂಡಲ್ಲು ಮೀಕು ಜೋಹಾರ್ಲು' ಎಂಬ ಧಾರಾವಾಹಿಯಲ್ಲಿ ನಟಿಸುತ್ತಾರೆ. ಈ ಧಾರಾವಾಹಿ ಅವರಿಗೆ ಸಾಕಷ್ಟು ಹೆಸರು ತಂದುಕೊಡುತ್ತದೆ. ಇದು ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಿತ್ತು.

ನಂತರ ಜೆಮಿನಿ ಟಿವಿಯಲ್ಲಿ ಪ್ರಸಾರವಾದ ಅರ್ಧಾಂಗಿ ಧಾರಾವಾಹಿಯಲ್ಲೂ ನಟಿಸುತ್ತಾರೆ ದುರ್ಗಾಶ್ರೀ. ಈ ಧಾರಾವಾಹಿ ಮೂಲಕ ಲಕ್ಷಣ್ ತೇಕುಮುಡಿ ಹಾಗೂ ದುರ್ಗಾಶ್ರೀ ಜೋಡಿ ಸಾಕಷ್ಟು ಖ್ಯಾತಿ ಗಳಿಸಿತ್ತು. ಇವರು ಮಾಡುತ್ತಿರುವ ರೀಲ್ಸ್‌ಗಳನ್ನು ನೋಡಿರುವ ಅಭಿಮಾನಿಗಳು ನೀವು ರಿಯಲ್ ಲೈಫ್‌ನಲ್ಲೂ ಜೋಡಿಯಾಗಿ ಎಂದು ಹಾರೈಸುತ್ತಿದ್ದರು.

ಇದೀಗ ಮತ್ತೆ ಕನ್ನಡ ಕಿರುತೆರೆಗೆ ಮರಳಿರುವ ದುರ್ಗಾಶ್ರೀ ವಧು ಪಾತ್ರಕ...