ಭಾರತ, ಮಾರ್ಚ್ 7 -- ಇಂಡೋ-ಪಾಶ್ಚಾತ್ಯ ಉಡುಗೆ:ಮದುವೆ ಸಮಾರಂಭಕ್ಕೆ ಸೂಟ್,ಸೀರೆ ಮತ್ತು ಲೆಹೆಂಗಾ ಧರಿಸುವುದು ಸಾಮಾನ್ಯ. ಆದರೆ, ಈ ಬಾರಿ ಹೊಸದನ್ನು ಪ್ರಯತ್ನಿಸಿ. ವಿಶೇಷವಾಗಿ ಸೀರೆ ಮತ್ತು ಲೆಹೆಂಗಾದಿಂದ ಬೇಸತ್ತಿದ್ದರೆ ಇಂಡೋ-ವೆಸ್ಟರ್ನ್ ಶೈಲಿಯ ಉಡುಪುಗಳನ್ನು ಪ್ರಯತ್ನಿಸಬಹುದು. ಇತ್ತೀಚಿನ ಮತ್ತು ಆಧುನಿಕವಾಗಿರುವುದರ ಜೊತೆಗೆ,ಟ್ರೆಂಡಿಂಗ್‌ನಲ್ಲೂ ಇವೆ. ಇಲ್ಲಿವೆ ಕೆಲವು ವಿನ್ಯಾಸಗಳು.

ಆಲಿಯಾ ಭಟ್ ಅವರ ಘರಾರಾ ಲುಕ್:ಆಲಿಯಾ ಭಟ್ ಅವರ ಇತ್ತೀಚಿನ ಲುಕ್ ನೆನಪಿರಬಹುದು. ಫ್ಲೇರ್ಡ್ ಘರಾರಾ ಹೊಂದಿರುವ ಶಾರ್ಟ್ ಸ್ಲೀವ್‌ಲೆಸ್ ಕುರ್ತಿ ಧರಿಸಿದ್ದರು. ಈ ಉಡುಪು ಚಿಕ್ಕ ವಯಸ್ಸಿನ ಹೆಣ್ಮಕ್ಕಳಿಗೆ ಮತ್ತು ಹದಿಹರೆಯದ ಹುಡುಗಿಯರಿಗೆ ಸೂಕ್ತವಾಗಿದೆ. ಮದುವೆ ಸಮಾರಂಭಕ್ಕೆ ಈ ಉಡುಪನ್ನು ಧರಿಸಬಹುದು.

ಧೋತಿ ಸ್ಕರ್ಟ್ ಮತ್ತು ಟಾಪ್:ಧೋತಿ ಪ್ಯಾಂಟ್‌ಗೆಶಾರ್ಟ್ ಸ್ಕರ್ಟ್ ಮತ್ತು ಜಾಕೆಟ್ ಟಾಪ್ ಅಥವಾ ಕೇಪ್ ಟಾಪ್ ಅನ್ನು ತೊಡಬಹುದು. ಈ ಉಡುಪು ಸೀರೆಗಿಂತ ಸಂಪೂರ್ಣವಾಗಿ ವಿಭಿನ್ನವಾದ ನೋಟವನ್ನು ನೀಡುತ್ತದೆ. ಮದುವೆ ಸಮಾರಂಭದಲ್ಲಿ ಇದನ್ನು ಧ...