ಭಾರತ, ಫೆಬ್ರವರಿ 5 -- ಸಿಹಿತಿಂಡಿಗಳನ್ನು ಯಾರು ತಾನೆ ಇಷ್ಟಪಡುವುದಿಲ್ಲ ಹೇಳೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕರು ಸಿಹಿತಿಂಡಿಯನ್ನು ಇಷ್ಟಪಡುತ್ತಾರೆ. ಕೆಲವರಿಗೆ ಊಟ ಮಾಡಿದ ನಂತರ ಏನಾದರೂ ಸಿಹಿತಿಂಡಿ ತಿನ್ನಲೇಬೇಕು. ಸಿಹಿತಿಂಡಿಯನ್ನು ಅಂಗಡಿಗಳಲ್ಲಿ ಖರೀದಿಸುವ ಬದಲು ಮನೆಯಲ್ಲೇ ಮಾಡಿಕೊಡಬಹುದು. ಇಲ್ಲಿ ಹಾಲು ಬೆರೆಸಿ ತಯಾರಿಸಲಾಗುವ ರವೆ ಲಾಡು ಪಾಕವಿಧಾನ ನೀಡಲಾಗಿದೆ. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟಪಡುವಿರಿ. ಇದರ ಪಾಕವಿಧಾನ ತುಂಬಾ ಸರಳ ಹಾಗೂ ತಿನ್ನಲು ತುಂಬಾ ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ. ರವೆ ಲಾಡು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಬಾಂಬೆ ರವೆ- ಎರಡು ಕಪ್, ಹಾಲು- ಒಂದೂವರೆ ಕಪ್, ತುಪ್ಪ- 8 ಚಮಚ, ಒಣ ಹಣ್ಣುಗಳು- ಅರ್ಧ ಕಪ್, ಸಕ್ಕರೆ- ಒಂದು ಕಪ್, ಏಲಕ್ಕಿ ಪುಡಿ- ಅರ್ಧ ಚಮಚ.

ಇದನ್ನೂ ಓದಿ: ರುಚಿಕರ ಗೋಧಿ ಲಾಡು ಪಾಕವಿಧಾನ ಇಲ್ಲಿದೆ

ಮಾಡುವ ವಿಧಾನ: ರವೆ ಲಾಡು ತಯಾರಿಸಲು, ಮೊದಲಿಗೆ ರವೆಯನ್ನು ಹಾಲಿನಲ್ಲಿ ನೆನೆಸಿಡಿ. ಇದನ್ನು 10 ನಿಮಿ...