Bengaluru, ಮಾರ್ಚ್ 14 -- ಮಖಾನಾವನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಇದರಿಂದ ತಯಾರಿಸಿದ ಲಡ್ಡುಗಳು ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಮಖಾನಾ ಲಾಡು ತಿನ್ನುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ಒಣ ಹಣ್ಣುಗಳು ಮತ್ತು ಬೀಜಗಳನ್ನು ಬೆರೆಸಿ ಈ ಲಾಡು ತಯಾರಿಸುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ. ಅಲ್ಲದೆ ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಸಿಹಿತಿಂಡಿ ತಿನ್ನುವ ಕಡುಬಯಕೆ ಉಂಟಾದರೆ ಈ ಆರೋಗ್ಯಕರ ರೆಸಿಪಿ ಟ್ರೈ ಮಾಡಬಹುದು. ಮಖಾನಾ ಲಾಡು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು: ಮಖಾನಾ - ಮೂರು ಕಪ್, ತುಪ್ಪ - ನಾಲ್ಕು ಚಮಚ, ಬಾದಾಮಿ - ಅರ್ಧ ಕಪ್, ಗೋಡಂಬಿ - ಅರ್ಧ ಕಪ್, ತೆಂಗಿನಕಾಯಿ ತುರಿ - ಒಂದು ಕಪ್, ಬೆಲ್ಲ - ಒಂದೂವರೆ ಕಪ್, ನೀರು - ಅರ್ಧ ಕಪ್.

ಮಾಡುವ ವಿಧಾನ: ಒಲೆಯ ಮೇಲೆ ಹುರಿಯಲು ಪ್ಯಾನ್ ಇಟ್ಟು ಅದಕ್ಕೆ ಮಖಾನಾ ಸೇರಿಸಿ ಅದು ಗರಿಗರಿಯಾಗುವವರೆಗೆ ಹುರಿಯಿರಿ. ಹುರಿದ ಮಖಾನಾವನ್ನು ತೆಗೆದು ಪಕ್ಕಕ್...