ಭಾರತ, ಫೆಬ್ರವರಿ 21 -- ಬರ್ಫಿ ತಿನ್ನಲು ಆಸೆಯಾದಾಗ ಬೇಕರಿಗಳಲ್ಲಿ ಖರೀದಿಸಿ ತಿನ್ನುತ್ತೀರಾ. ಆದರೆ, ಮನೆಯಲ್ಲೇ ರುಚಿಕರವಾದ ಬರ್ಫಿ ತಯಾರಿಸಿ ತಿನ್ನಬಹುದು. ಬ್ರೆಡ್ ಇದ್ದರೆ ಸಾಕು ನೀವು ರುಚಿಕರವಾದ ಬರ್ಫಿ ತಯಾರಿಸಬಹುದು. ಮನೆಗೆ ಯಾರಾದರೂ ಅತಿಥಿಗಳು ಬಂದಾಗಲೂ ಇದನ್ನು ಮಾಡಿ ಅವರಿಗೆ ಕೊಡಬಹುದು. ಖಂಡಿತ ಇಷ್ಟಪಡುತ್ತಾರೆ. ಬ್ರೆಡ್ ಬರ್ಫಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಬ್ರೆಡ್- 4, ಹಾಲು- ಸುಮಾರು ಒಂದೂವರೆ ಕಪ್, ಸಕ್ಕರೆ- 1/3 ಕಪ್, ತುಪ್ಪ - 1 ಚಮಚ, ಏಲಕ್ಕಿ ಪುಡಿ - 1/2 ಚಮಚ, ಒಣ ಹಣ್ಣುಗಳು - ಅಗತ್ಯಕ್ಕೆ ತಕ್ಕಷ್ಟು.

ತಯಾರಿಸುವ ವಿಧಾನ: ರುಚಿಕರವಾದ ಬರ್ಫಿ ತಯಾರಿಸಲು, ಮೊದಲು ಬ್ರೆಡ್ ಅನ್ನು ಸಣ್ಣ ತುಂಡುಗಳಾಗಿ ಒಡೆದು ಮಿಕ್ಸಿಯಲ್ಲಿ ಮೃದುವಾಗಿ ಪುಡಿ ಮಾಡಿ. ಈಗ ಗ್ಯಾಸ್ ಮೇಲೆ ಒಂದು ಬಾಣಲೆಯಿಟ್ಟು ಅದಕ್ಕೆ ಹಾಲು ಹಾಕಿ ಚೆನ್ನಾಗಿ ಕುದಿಸಿ. ಹಾಲು ದಪ್ಪ ಮತ್ತು ಕೆನೆಯಾಗುವವರೆಗೆ ಕುದಿಸಿ. ಈ ಮಧ್ಯೆ, ಬ್ರೆಡ್ ತೆಗೆದುಕೊಂಡು ಅದನ್ನು ಪುಡಿ ಮಾಡಿ.

ಇದನ್ನೂ ಓದಿ...