Bengaluru, ಮೇ 9 -- ಕ್ರೈಸ್ತರು ಹೊಸ ಧರ್ಮ ಗುರುವಿನ ನೇಮಕವಾಗಿದೆ. ಅಮೆರಿಕ ಮೂಲದ ಕಾರ್ಡಿನಲ್ ರಾಬರ್ಟ್ ಪ್ರಾನ್ಸಿಸ್ ಪ್ರಿವೊಸ್ಟ್ 267ನೇ ಪೋಪ್ ಆಗಿ ಗುರುವಾರ (ಮೇ 8) ಆಯ್ಕೆಯಾಗಿದ್ದಾರೆ. ಚಿಕಾಗೋದ 69 ವರ್ಷದ ಇಲಿನಾಯ್ಸ್ ಅವರು ಧರ್ಮಗುರು ಲಿಯೋ-14 ಅವರನ್ನು ಪೋಪ್ ಆಗಿ ಆಯ್ಕೆ ಮಾಡಿದ್ದಾರೆ. ರಾಬರ್ಟ್ ಪ್ರಾನ್ಸಿಸ್ ಪ್ರಿವೊಸ್ಟ್ ಅವರು ರೋಮನ್ ಕ್ಯಾಥೋಲಿಕ್ ಚರ್ಚ್ ನಾಯಕ ಅಥವಾ ಪೋಪ್ ಆಗಿ ನೇಮವಾಗಿರುವ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಪೋಪ್ ಆಯ್ಕೆಗಾಗಿ ರಹಸ್ಯವಾಗಿ ನಡೆದ ಮತದಾನದಲ್ಲಿ 133 ಕಾರ್ಡಿನಲ್ ಗಳ ಪೈಕಿ 89 ಕಾರ್ಡಿನಲ್ ಗಳು ರಾಬರ್ಟ್ ಪ್ರಾನ್ಸಿಸ್ ಪರ ಮತಗಳನ್ನು ಚಲಾಯಿಸಿದ್ದರು. ಎರಡು ಬಾರಿ ನಡೆದಿದ್ದ ಸಮಾವೇಶಗಳಲ್ಲಿ ಪೋಪ್ ಆಯ್ಕೆ ಸಾಧ್ಯವಾಗಿರಲಿಲ್ಲ. ಆದರೆ ಮೂರನೇ ಬಾರಿಗೆ ಪೋಪ್ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಸಿಸ್ಟೈನ್ ಚಾಪೆಲ್ ಚಿಮಣಿಯಲ್ಲಿ ಬಿಳಿ ಹೊಗೆ ಕಾಣಿಸಿಕೊಂಡಿತು. ಇದು ಕ್ಯಾಪೋಲಿಕ್ ಆಯ್ಕೆಯಾಗಿರುವುದನ್ನು ದೃಢಪಡಿಸಿತು. ಬಿಳಿ ಹೊಗೆ ಹೊರಹ...