ಭಾರತ, ಫೆಬ್ರವರಿ 18 -- BWSSB Updates: ಬೆಂಗಳೂರು ನಗರದ ಸಿವಿ ರಾಮನ್ ನಗರ, ಇಂದಿರಾ ನಗರ ಸೇರಿ ವಿವಿಧೆಡೆ ಫೆ 20ರಂದು ಬೆಳಿಗ್ಗೆ 9 ರಿಂದ 12 ಗಂಟೆ ಕಾಲ ಕಾವೇರಿ ನೀರು ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ಜಲ ಮಂಡಳಿ ಇಂದು (ಫೆ 18) ತಿಳಿಸಿದೆ. ಇದೇ ದಿನ ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಆಯೋಜಿಸಲಾಗಿದೆ. ನೀರಿನ ಪೂರೈಕೆ ಸೇರಿ, ಜಲ ಮಂಡಳಿಗೆ ಸಂಬಂಧಿಸಿದ ವಿವಿಧ ಅಹವಾಲುಗಳನ್ನು ಜನ ಈ ಅದಲಾತ್ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಬೆಂಗಳೂರು ಜಲ ಮಂಡಳಿ ತಿಳಿಸಿದೆ.

ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ವಾಯುವ್ಯ-2, ವಾಯುವ್ಯ-4, ಕೇಂದ್ರ 1-2, ಈಶಾನ್ಯ - 2, ಉತ್ತರ 1-2, ಉತ್ತರ 2-2, ದಕ್ಷಿಣ 1-2, ದಕ್ಷಿಣ 2-2, ನೈಋತ್ಯ -2, ನೈಋತ್ಯ -5, ಪೂರ್ವ 1-3 ಮತ್ತು ಪೂರ್ವ 2-3, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಫೆಬ್ರವ...