ಭಾರತ, ಮಾರ್ಚ್ 15 -- ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಜೀವನ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇತ್ತೀಚೆಗಷ್ಟೇ ಮೆಟ್ರೋ ಪ್ರಯಾಣ ದರ ಏರಿಕೆಯಾಗಿ ಜನಸಾಮಾನ್ಯರಿಗೆ ಭಾರಿ ಹೊರೆಯಾಗಿದೆ. ಮತ್ತೊಂದೆಡೆ ಬೇಸಿಗೆ ಆರಂಭದಲ್ಲೇ ನೀರಿನ ಬವಣೆಯೂ ಶುರುವಾಗುತ್ತಿದ್ದು, ನೀರಿನ ದರ ಏರಿಕೆ ಚರ್ಚೆ ಜೋರಾಗಿದೆ. ಇದರ ನಡುವೆ, ಏಪ್ರಿಲ್‌ ತಿಂಗಳಿಂದ ಕಸಕ್ಕೂ ಶುಲ್ಕ ಪಾವತಿಸಬೇಕಾಗಿ ಬಂದಿದೆ. ಕಸ ವಿಂಗಡಣೆ ನಿಯಮವು ನಗರದಲ್ಲಿ ವರ್ಷಗಳಿಂದ ಚಾಲ್ತಿಯಲ್ಲಿದ್ದು, ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಕೊಡುವ ಕೆಲಸವಿತ್ತು. ಇನ್ಮುಂದೆ ಮನೆ ಹಾಗೂ ಅಪಾರ್ಟ್‌ಮೆಂಟ್‌ ಮಾಲೀಕರು ಕಸ ವಿಲೇವಾರಿಗೂ ಶುಲ್ಕ ಪಾವತಿಸಬೇಕು. ಏಪ್ರಿಲ್‌ ತಿಂಗಳಿನಿಂದಲೇ ಮನೆ ಮನೆಯಿಂದ ಕಸ-ತ್ಯಾಜ್ಯ ಸಂಗ್ರಹಿಸುವುದಕ್ಕೆ ಸೇವಾ ಶುಲ್ಕ ವಸೂಲಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ಸಿಲಿಕಾನ್‌ ಸಿಟಿ ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಬಹುತೇಕ ಎಲ್ಲಾ ನಗರಗಳಲ್ಲೂ ಕಸ ವಿಂಗಡಣೆ ಹಾಗೂ ವಿಲೇವೇರಿ ಒಂದು ಸವಾಲು. ಅದರಲ್ಲೂ ನಿತ್ಯ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಬ...