Bengaluru, ಫೆಬ್ರವರಿ 22 -- ಇತ್ತೀಚಿನ ದಿನಗಳಲ್ಲಿ ಪ್ರೇಮ ಸಂಬಂಧಗಳಲ್ಲಿಯೂ ಹೊಸ ಹೊಸ ಟ್ರೆಂಡ್‌ಗಳು ಮೂಡಿಬರುತ್ತಿವೆ. 'ಸಿಮ್ಮರ್ ಡೇಟಿಂಗ್' (Simmer Dating) ಎಂಬುದು ಇತ್ತೀಚೆಗೆ ಯುವಕರಲ್ಲಿ, ವಿಶೇಷವಾಗಿ ಹೊಸ ತಲೆಮಾರಿನಲ್ಲಿ ಹೆಚ್ಚಾಗಿ ಮೆಚ್ಚುಗೆಯನ್ನು ಗಳಿಸುತ್ತಿದೆ. ಪ್ರತಿ ಸಂಬಂಧವು ವೇಗದ ಮೆಟ್ರೋ ರೈಲು ತರಹವೇ ಇರಬೇಕೆಂದಿಲ್ಲ. ನಿಧಾನವಾಗಿ ನಡೆಯುವ ಸಂಬಂಧವನ್ನು ಸಿಮ್ಮರ್ ಡೇಟಿಂಗ್ ಎಂದು ಕರೆಯುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಸಿಮ್ಮರ್ ಡೇಟಿಂಗ್ ಎಂದರೆ ಸಂಬಂಧವನ್ನು ನಿಧಾನವಾಗಿ, ದೀರ್ಘವಾಗಿ ಮುಂದುವರಿಸುವುದು. ಇದು ಮೊದಲಿನ 'ಸ್ಲೋ ಡೇಟಿಂಗ್' ತತ್ವದ ಮುಂದುವರಿದ ಭಾಗವೇ ಆಗಿದೆ. ಇತ್ತೀಚಿನ ತ್ವರಿತ ಡೇಟಿಂಗ್ ಅಪ್ಲಿಕೇಶನ್‌ಗಳು ಅಥವಾ ವೇಗದ ಸಂಬಂಧಗಳ ವಿರುದ್ಧ, ಸಿಮ್ಮರ್ ಡೇಟಿಂಗ್ ಸಂಬಂಧವನ್ನು ನಿಜವಾದ ಪರಿಚಯದ ಮೂಲಕ ಬೆಳೆಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಶುರುವಾಯ್ತು ಪೈನಾಪಲ್ ಡೇಟಿಂಗ್ ಟ್ರೆಂಡ್‌; ಸಿಂಗಲ್ಸ್ ಒಂದಾಗಲು ಅನಾನಸ್ ಹಣ್ಣೇ ಸಿಗ್ನಲ್, ರೋಮ್ಯಾನ್ಸ್​ಗೆ ಇದೆಂಥಾ ವೇದಿಕ...