Bangalore, ಮೇ 7 -- ಕರ್ನಾಟಕ ಕೇಡರ್‌ನ 1986 ನೇ ಬ್ಯಾಚ್‌ನ ಅಧಿಕಾರಿಯಾದ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ಇನ್ನೂ ಒಂದು ವರ್ಷ ಮುಂದುವರಿಯಲಿದ್ದಾರೆ.
22 ವರ್ಷಕ್ಕೆ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡು ಕರ್ನಾಟಕದ ನಂಜನಗೂಡು, ಬಳ್ಳಾರಿ, ಮೈಸೂರು. ಬೆಂಗಳೂರು ಸಹಿತ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದವರು ಪ್ರವೀಣ್ ಸೂದ್.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅವರನ್ನು ಡಿಜಿಪಿ ಹುದ್ದೆಗೆ ನಿಯೋಜನೆ ಮಾಡಲಾಗಿತ್ತು. ಮೂರು ವರ್ಷ ಕಾಲ ಡಿಜಿಪಿಯಾಗಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಲೇ ಅವರು ಕೇಂದ್ರ ಸೇವೆಗೆ ತೆರಳುವ ನಿರ್ಧಾರ ಮಾಡಿದ್ದರು. ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.
ಈ ಹಿಂದೆ ಅವರು ಸಿಬಿಐನಲ್ಲಿ ಕೆಲಸ ಮಾಡದೇ ಇದ್ದರೂ ಕರ್ನಾಟಕದಲ್ಲಿ ಹೆಚ್ಚು ವರ್ಷ ವಿಚಕ್ಷಣಾ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ಸಿಬಿಐನ ಉನ್ನತ ಹುದ್ದೆಗೆ ನಿಯೋಜಿಸಲಾಗಿತ್ತು.
ಸಿಬಿಐ ನಿರ್ದೇಶಕರಾಗಿ ಅವರ ಅವಧಿ ಈಗ ಮುಗಿಯಬೇಕಾಗಿತ್ತಾದರೂ ಎರಡು ವರ್ಷ ವಿವಾದವಿಲ್ಲದೇ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.