ಭಾರತ, ಫೆಬ್ರವರಿ 26 -- CBSE Class 10 Social Science Exam Analysis: ಸೆಂಟ್ರಲ್‌ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ತನ್ನ 10ನೇ ತರಗತಿಯ ಸಮಾಜ ವಿಜ್ಞಾನ (ಸೋಷಿಯಲ್ ಸೈನ್ಸ್‌) ಪರೀಕ್ಷೆಯನ್ನು ಮಂಗಳವಾರ (ಫೆ 25) ನಡೆಸಿತು. ಭಾರತದ 7842 ಕೇಂದ್ರಗಳಲ್ಲಿ, 26 ಅಂತಾರಾಷ್ಟ್ರೀಯ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯಿತು. ಈ ವರ್ಷ 8000 ಶಾಲೆಗಳ 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 10 ಮತ್ತು 12 ನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದಾರೆ. ಮಂಗಳವಾರ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಧ್ಯಮ ಸ್ತರದ ಕಷ್ಟದ್ದಾಗಿತ್ತು. ಆದರೆ ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಲ್ಪಟ್ಟಿತ್ತು. ಯಾರು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿರುತ್ತಾರೋ ಅಂಥವರಿಗೆ ಈ ಪ್ರಶ್ನೆ ಪತ್ರಿಕೆ ಸುಲಭವಾಗಿರಬಹುದು ಎಂದು ಶಿಕ್ಷಕರು ಹೇಳಿದ್ದಾರೆ.

ದೇಶಾದ್ಯಂತ ಮಂಗಳವಾರ (ಫೆ 25) ನಡೆದ ಸೋಷಿಯಲ್ ಸೈನ್ಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹೇಗಿತ್ತು ಎಂದು ಶಿಕ್ಷಕರು ಅವಲೋಕನ ಮಾಡಿದ್ದಾರೆ. ಮಧ್ಯಮಸ್ತರದ ಕಷ್ಟವಾದ ಪ್ರಶ್ನೆಗಳನ್ನು ಒಳಗೊಂಡ ಪ್...