ಭಾರತ, ಮೇ 13 -- ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತನ್ನ 10 ಮತ್ತು 12 ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶ ಹಾಗೂ ಅಂಕಪಟ್ಟಿಗಳನ್ನು ನೋಡಲು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಪರಿಗಣಿಸಬೇಕು ಎಂದು ಸಿಬಿಎಸ್‌ಇ ಕೋರಿದೆ. ಈ ವರ್ಷ 10 ಮತ್ತು 12 ನೇ ತರಗತಿ ಸೇರಿ ಒಟ್ಟು 42 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹಾಗಾಗಿ ಈಗ ರಿಸಲ್ಟ್‌ ನೋಡಲು ಸಾಕಷ್ಟು ದಟ್ಟಣೆ ಇರುತ್ತದೆ, ಇದರಿಂದ ಸರ್ವರ್‌ ಬ್ಯುಸಿ ಬರುವ ಸಾಧ್ಯತೆಯೂ ಇದೆ. ಸಾಮಾನ್ಯವಾಗಿ ಕಾನೂನುಬದ್ಧ ವೆಬ್‌ಸೈಟ್‌ಗಳು ಮತ್ತು ಅನಧಿಕೃತ ಪೋರ್ಟಲ್‌ಗಳ ನಡುವೆ ಗೊಂದಲಕ್ಕೆ ಕಾರಣವಾಗುತ್ತದೆ. ಇದರಿಂದ ನೀವು ಫಲಿತಾಂಶ ನೋಡುವುದು ತಡವಾಗಬಹುದು. ಹಾಗಾಗಿ ಈ ಅಧಿಕೃತ ವೆಬ್‌ಸೈಟ್‌ಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು.

2025 ರ ಸಿಬಿಎಸ್‌ಇ ಫಲಿತಾಂಶ ನೋಡಲು ಸುಲಭವಾಗಲಿ ಎನ್ನುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಸಹಯೋ...