ಭಾರತ, ಮೇ 5 -- ಸಿಬಿಎಸ್ಇ ನಿಯಮ ಬದಲು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡಿ ಎಜುಕೇಶನ್ (ಸಿಬಿಎಸ್‌ಇ) ಈ ಸಲದ ಅಂದರೆ 2025ರ ಸಿಬಿಎಸ್‌ಇ ಫಲಿತಾಂಶ ಪ್ರಕಟಿಸುವ ಮೊದಲೇ 10ನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶ ನಂತರದ ಪ್ರಕ್ರಿಯೆಯನ್ನು ಸುಧಾರಿಸುವ ಪ್ರಯತ್ನ ಮಾಡಿದೆ. ಇದಕ್ಕಾಗಿ ಹೊಸ ನಿಯಮಗಳನ್ನು ಅದು ಪರಿಚಯಸಿದ್ದು, ಉತ್ತರ ಪತ್ರಿಕೆಗಳ ಫೋಟೋ ಕಾಪಿಗಳನ್ನು ಮೊದಲು ನೀಡಲಾಗುತ್ತಿದ್ದು, ಅದನ್ನು ನೋಡಿಕೊಂಡು ವೆರಿಫಿಕೇಶನ್ ಮಾಡಬೇಕಾ ಅಥವಾ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕಾ ಎಂಬದನ್ನು ವಿದ್ಯಾರ್ಥಿಗಳು ನಿರ್ಣಯಿಸಬಹುದು ಎಂದು ಮಂಡಳಿ ಹೇಳಿದೆ.

ಪ್ರಸ್ತುತ ಸಿಬಿಎಸ್‌ಇ ನಿಯಮ ಪ್ರಕಾರ, ವಿದ್ಯಾರ್ಥಿಗಳು ಮೊದಲು ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಅದಾದ ನಂತರ ಉತ್ತರ ಪತ್ರಿಕೆಗಳ ಫೋಟೋ ಕಾಪಿಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕಾಗಿತ್ತು. ಈಗ ನಿಯಮ ಬದಲಾದ ಕಾರಣ, ಮೊದಲೇ ಉತ್ತರ ಪತ್ರಿಕೆಗಳ ಫೋಟೋಕಾಪಿಯನ್ನು ಪಡೆಯಬಹುದು.

1) ಮೌಲ್ಯಮಾಪನವಾಗಿರುವ ಉತ್ತರ ಪತ್...