ಭಾರತ, ಮೇ 13 -- ಸಿಬಿಎಸ್‌ಇ ಫಲಿತಾಂಶ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಶೇಕಡ 93.66 ಉತ್ತೀರ್ಣ ಪ್ರಮಾಣ ಇದ್ದು, ವಿದ್ಯಾರ್ಥಿಗಳ ಸಾಧನೆಯು ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಅವರೇಜ್‌ (ಸಿಜಿಪಿಎ) ಪ್ರಕಾರ ದಾಖಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಅಥವಾ ಇನ್ಯಾವುದೇ ಕಚೇರಿ ದಾಖಲೆಗಳಿಗಾಗಿ ತಮ್ಮ ಗ್ರೇಡ್‌ ಅಥವಾ ಸಿಜಿಪಿಎಯನ್ನು ಪರ್ಸಂಟೇಜ್‌ಗೆ ಪರಿವರ್ತಿಸಬೇಕು. ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ಗ್ರೇಡಿಂಗ್‌ ವ್ಯವಸ್ಥೆಯಿಂದ ಶೇಕಡಾಕ್ಕೆ ಬದಲಾಯಿಸುವುದು ಹೇಗೆ ಎಂದು ಚಿಂತಿತರಾಗಿದ್ದೀರಾ? ಅದನ್ನು ತಿಳಿಯೋಣ.

10ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅಳೆಯುವುದಕ್ಕಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಅಳವಡಿಸಿಕೊಂಡಿರುವ ಗ್ರೇಡಿಂಗ್ ವ್ಯವಸ್ಥೆಯೇ ಸಿಜಿಪಿಎ ಅಥವಾ ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಅವರೇಜ್. ಅಂಕಗಳನ್ನು ಹಾಗೆಯೇ ದಾಖಲಿಸುವ ಬದಲು ವಿದ್ಯಾರ್ಥಿಗಳನ್ನು ಉತ್ತೇಜಿಸುವ ...