ಭಾರತ, ಫೆಬ್ರವರಿ 19 -- ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ -CBSE) 2025ರ ಬೋರ್ಡ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಹೇಳಿಕೆಗಳನ್ನು ಅಲ್ಲಗಳೆದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿಯು "ಆಧಾರರಹಿತ ಮತ್ತು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಭೀತಿಯನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಲಾಗಿದೆ" ಎಂದು ಮಂಡಳಿಯು ಸೋಮವಾರ (ಫೆ.18) ಸ್ಪಷ್ಟಪಡಿಸಿದೆ. ಭಾರತ ಮಾತ್ರವಲ್ಲದೆ ವಿದೇಶಗಳ 8,000 ಶಾಲೆಗಳ ಸುಮಾರು 44 ಲಕ್ಷ ವಿದ್ಯಾರ್ಥಿಗಳಿಗೆ ಮಂಡಳಿಯು 10 ಮತ್ತು 12ನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ನಡೆಸುತ್ತಿದೆ. ಪರೀಕ್ಷೆಗಳು ಈಗಾಗಲೇ ಫೆ. 15ರಿಂದ ಆರಂಭಗೊಂಡಿದ್ದು, ಏಪ್ರಿಲ್ 4ರವರೆಗೆ ನಡೆಯಲಿವೆ.

"ಎಲ್ಲಾ ಪರೀಕ್ಷೆಗಳು ಸುಗಮವಾಗಿ ನಡೆಯಲು ಮಂಡಳಿಯು ಸಮಗ್ರ ವ್ಯವಸ್ಥೆ ಮಾಡಿದೆ. ಈ ನಡುವೆ ಯೂಟ್ಯೂಬ್, ಫೇಸ್ಬುಕ್, 'ಎಕ್ಸ್' (ಟ್ವಿಟರ್) ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೆಲವು ವ್ಯಕ್ತಿಗಳು ಪ್ರಶ್ನೆ ಪತ್ರಿಕೆ ಸೋರಿಕೆಗೆ...