Bengaluru, ಏಪ್ರಿಲ್ 17 -- ಸುನಾಮಿ ಕಿಟ್ಟಿ ಅಭಿನಯದ 'ಕೋರ' ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆಯಾಗಿದೆ. 'ದಿ ಡ್ಯಾನ್ಸಿಂಗ್‍ ಸ್ಟಾರ್', 'ತಕಧಿಮಿತ', 'ಇಂಡಿಯನ್‍', 'ಬಿಗ್‍ ಬಾಸ್‍' ಮುಂತಾದ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಕಿಟ್ಟಿ, ಹೀರೋ ಆಗಬೇಕು ಎಂದು 10 ವರ್ಷಗಳ ಹಿಂದೆಯೇ ಕನಸು ಕಂಡಿದ್ದವರು. ಸುಮಾರು ಒಂದು ದಶಕದ ಹಿಂದೆಯೇ ಕಿಟ್ಟಿಯನ್ನು ಹೀರೋ ಮಾಡುವ ಪ್ರಯತ್ನ ಕನ್ನಡದಲ್ಲಾಗಿತ್ತು. ಆದರೆ, ಕಾರಣಾಂತರಗಳಿಂದು ಅದು ಸಾಧ್ಯವಾಗಿರಲಿಲ್ಲ. ಈಗ 'ಕೋರ' ಚಿತ್ರದ ಮೂಲಕ ಕಿಟ್ಟಿ ಕನಸು ಕೊನೆಗೂ ನನಸಾಗುತ್ತಿದೆ.

ಬರೀ ಕಿಟ್ಟಿ ಅಷ್ಟೇ ಅಲ್ಲ, ರಿಯಾಲಿಟಿ ಶೋಗಳಲ್ಲಿ ಗಮನ ಸೆಳೆದು ನಂತರ ಚಿತ್ರರಂಗದಲ್ಲಿ ಹೀರೋ ಆದ ಹಲವು ಪ್ರತಿಭಾವಂತರು ಸಿಗುತ್ತಾರೆ. ಕಿರುತೆರೆಯಲ್ಲಿ ಸಿಕ್ಕ ಜನಪ್ರಿಯತೆಯೇ ಹಿರಿತೆರೆಯಲ್ಲೂ ಅವರಿಗೆ ಸಿಕ್ಕಿದೆ ಎಂದು ಹೇಳುವುದು ಕಷ್ಟ. ಆದರೆ, ರಿಯಾಲಿಟಿ ಶೋಗಳಲ್ಲಿನ ಅವರ ಜನಪ್ರಿಯತೆಯೇ, ಹಿರಿತೆರೆಗೆ ಬರುವುದಕ್ಕೆ ವೇದಿಕೆಯಾಗಿದೆ ಎಂದರೆ ತಪ್ಪಿಲ್ಲ. ಹೀಗೆ ಹಿರಿತೆರೆಗೆ ರಿಯಾಲಿಟಿ ಶೋಗಳಲ್...