Bengaluru, ಏಪ್ರಿಲ್ 5 -- Manoj Kumar Death: ಬಾಲಿವುಡ್‍ನ ಜನಪ್ರಿಯ ನಟ-ನಿರ್ದೇಶಕ-ನಿರ್ಮಾಪಕ ಮನೋಜ್‍ ಕುಮಾರ್, ಶುಕ್ರವಾರ ಮುಂಜಾವಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರ ಸಾವಿಗೆ ಬರೀ ಬಾಲಿವುಡ್‍ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಮನೋಜ್‍ ಕುಮಾರ್ ಅವರ ಅಂತ್ಯಕ್ರಿಯೆ, ಶನಿವಾರ ಬೆಳಿಗ್ಗೆ 11 ಗಂಟೆಗೆ ನೆರವೇರಿದೆ.

ಮನೋಜ್‍ ಕುಮಾರ್ ತಮ್ಮ ಚಿತ್ರಜೀವನದಲ್ಲಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಶೈಲಿಯ ಚಿತ್ರಗಳಲ್ಲಿ ಅವರು ನಟಿಸಿದ್ದರೂ, ಅವರು ಹೆಚ್ಚು ಜನಪ್ರಿಯವಾಗಿದ್ದು ದೇಶಭಕ್ತಿಯ ಚಿತ್ರಗಳಿಗೆ. ಮನೋಜ್‍ ಕುಮಾರ್ ತಮ್ಮ ನಿರ್ದೇಶನದ ಚಿತ್ರಗಳಲ್ಲಿ, ತಾವು ಮಾಡುವ ಪಾತ್ರಗಳಲ್ಲಿ ಹೆಚ್ಚಾಗಿ ದೇಶಭಕ್ತಿಯನ್ನು ಬಿಂಬಿಸುತ್ತಿದ್ದರು. ಅದೇ ಕಾರಣಕ್ಕೆ ಅವರಿಗೆ 'ಮಿಸ್ಟರ್ ಭಾರತ್‍ ಕುಮಾರ್‌' ಎಂದು ಕರೆಯಲಾಗುತ್ತಿತ್ತು. ಬೇರೆ ನಟರಿಗೆ ಸ್ಟಾರ್ ಬಿರುದಿದ್ದರೆ, ಮನೋಜ್‍ ಕುಮಾರ್ ಅವರನ್ನು ಮಾತ್ರ ಇದುವರೆಗೂ 'ಮಿಸ್ಟರ್ ಭಾರತ್‍' ಎಂದು ಸಂಬೋಧಿಸಲಾಗುತ್...