ಭಾರತ, ಮಾರ್ಚ್ 16 -- ಸಿನಿಮಾರಂಗ ಪ್ರವೇಶಿಸುವ ಮೊದಲು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ದಕ್ಷಿಣದ ಟಾಪ್ ನಟಿಯರಿವರು

ಮೃಣಾಲ್ ಠಾಕೂರ್ ತೆಲುಗಿನಲ್ಲಿ 'ಸೀತಾರಾಮಮ್' ಮತ್ತು 'ಹಾಯ್ ನಾನ್ನ' ಸಿನಿಮಾ ಮೂಲಕ ಹಿಟ್‌ ಪಟ್ಟ ಪಡೆದಿದ್ದಾರೆ. ಬಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ಆದರೆ ಅನೇಕರಿಗೆ ಗೊತ್ತಿಲ್ಲ, ಇದೇ ಮೃಣಾಲ್‌, ಸಿನಿಮಾಕ್ಕೂ ಮುನ್ನ ಧಾರಾವಾಹಿಗಳಲ್ಲಿ ನಟಿಸಿದ್ದರು. ಹಿಂದಿಯಲ್ಲಿ ಅರ್ಜುನ್, ಕುಂಕುಮ ಭಾಗ್ಯ ಸೇರಿ ಇನ್ನೂ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.

ಕೀರ್ತಿ ಸುರೇಶ್ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಅಗ್ರ ನಾಯಕಿಯಾಗಿ ಮುಂದುವರೆದಿದ್ದಾರೆ. ಇಂತಿಪ್ಪ ಕೀರ್ತಿ ಸುರೇಶ್ ಬಾಲ ಕಲಾವಿದೆಯಾಗಿ ಈ ಹಿಂದೆ ಸಂತಾನ ಗೋಪಾಲಂ ಮತ್ತು ಕೃಷ್ಣ ಕೃಪಾ ಸಾಗರಂ ಧಾರಾವಾಹಿಗಳಲ್ಲಿ ನಟಿಸಿದ್ದರು.

ನಾಯಕಿಯಾಗಿ ಪದಾರ್ಪಣೆ ಮಾಡುವ ಮೊದಲು ಮಲಯಾಳಂ ಟಿವಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು ನಯನತಾರಾ. ಈ ಟಿವಿ ಕಾರ್ಯಕ್ರಮದ ಮೂಲಕವೇ ಅವರಿಗೆ ನಾಯಕಿಯಾಗುವ ಅವಕಾಶ ಸಿಕ್ಕಿತು.

ದಕ್ಷಿಣದ ವಿಶಿಷ್ಟ ...