ಭಾರತ, ಏಪ್ರಿಲ್ 14 -- ನಟಿ ಮೇಘಾ ಶೆಟ್ಟಿ ಜೀ ಕನ್ನಡದ 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಖ್ಯಾತಿ ಪಡೆದವರು. ನಂತರ ಹಿರಿತೆರೆಯತ್ತ ಮುಖ ಮಾಡುವ ಅವರು 'ತ್ರಿಪಲ್ ರೈಡಿಂಗ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡುತ್ತಾರೆ. ಈಗಾಗಲೇ 3 ಸಿನಿಮಾಗಳಲ್ಲಿ ನಟಿಸಿದ್ದು, ಇನ್ನೂ 3 ಚಿತ್ರಗಳು ಅವರ ಕೈಯಲ್ಲಿವೆ. ಆದರೆ ಇವರಿಗೆ ಸಿನಿಮಾಗಳಿಂದ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ ಅನ್ನೋದು ಸತ್ಯ. ಇದೀಗ ಮೇಘಾ ಪುನಃ ಕಿರುತೆರೆಯತ್ತ ಮುಖ ಮಾಡಿದ್ದಾರೆ.

ಈ ಬಾರಿ ಮೇಘಾ ಶೆಟ್ಟಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿ‌ದ್ದಾರೆ. ಮೇಘಾ ಶೆಟ್ಟಿ ನಿರ್ಮಾಣದ ಧಾರಾವಾಹಿ ಇಂದಿನಿಂದಲೇ (ಏಪ್ರಿಲ್ 14)ಪ್ರಸಾರವಾಗಲಿದೆ. ಯಾವುದು ಅಂತ ಈಗ ನಿಮಗೆ ಗೊತ್ತಾಗಿರಬಹುದು ಅಲ್ವಾ? ಹೌದು ನಟಿ ಮೇಘಾ ಶೆಟ್ಟಿ ನಿರ್ಮಾಣದ ಧಾರಾವಾಹಿ ಮುದ್ದು ಸೊಸೆ. ಇದು ಕಲರ್ಸ್‌ ಕನ್ನಡದಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಮುದ್ದು ಸೊಸೆ ನಿರ್ಮಾಣದ ಜೊತೆ ಇದರಲ್ಲಿ ನಟಿಸುತ್ತಿದ್ದಾರೆ ಮೇಘಾ ಶೆಟ್ಟಿ. ಈ ಧಾರಾವಾಹಿಯಲ್ಲಿ ಅತಿಥಿ ಪಾತ್...