ಭಾರತ, ಫೆಬ್ರವರಿ 2 -- ಸಮಾಜ ಕಟ್ಟುಹೋಗಿದೆ. ಒಳ್ಳೆಯ ಜನರಿಗಾಗಿ ಹುಡುಕಾಡುವ ಸ್ಥಿತಿ ಬಂದಿದೆ ಎಂದು ಅದೆಷ್ಟೋ ಬಾರಿ ಹೇಳುವುದಿದೆ. ಆದರೆ ಪ್ರಪಂಚ ನಾವಂದುಕೊಂಡಷ್ಟು ಕೆಟ್ಟುಹೋಗಿಲ್ಲ ಎನ್ನುವುದು ಕೂಡಾ ವಾಸ್ತವ. ಆಗಾಗ ಸಜ್ಜನ ವ್ಯಕ್ತಿಗಳ ದರ್ಶನ ಆಗುತ್ತಿರುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲೂ ಇಂಥಾ ಉದಾಹರಣೆಗಳು ಸಿಗುತ್ತವೆ. ಇತ್ತೀಚೆಗೆ ಇಂತಹದೇ ಒಬ್ಬ ದೊಡ್ಡ ವ್ಯಕ್ತಿಯನ್ನು ಭೇಟಿಯಾದ ಬಗ್ಗೆ ಫೇಸ್‌ಬುಕ್‌ನಲ್ಲಿ ವೀರಕಪುತ್ರ ಎಂ ಶ್ರೀನಿವಾಸ ಎಂಬವರು ಹಂಚಿಕೊಂಡಿದ್ದಾರೆ. ರೈಲಿನಲ್ಲಿ ಕಳೆದುಕೊಂಡಿದ್ದ ವಾಚ್‌ ಅನ್ನು ಅದೇ ರೈಲಿನ ಸಿಬ್ಬಂದಿಯೊಬ್ಬರು ಅಚ್ಚರಿಯ ರೀತಿಯಲ್ಲಿ ಮರಳಿಸಿರುವ ಕತೆ ಇದು. ಮುಂದಿರುವುದೇ ವೀರಕಪುತ್ರ ಎಂ ಶ್ರೀನಿವಾಸ ಅವರ ಬರಹ.

ಕಳೆದ ಶುಕ್ರವಾರ ಬಾಗಲಕೋಟೆಗೆ ಗೋಲ್‌ಗುಂಬಜ್ ರೈಲಿನ ಮೂಲಕ ಹೋಗುವುದೆಂದು ನಿರ್ಧಾರ ಮಾಡಿದ್ದೆ. ನಾನು ನನ್ನ ಕ್ಯಾಬಿನ್‌ಗೆ ಹೋದಾಗ, ನನ್ನ ಆಸನದ ಎದುರಿನ ಆಸನದಲ್ಲಿ ಬಾಗಲಕೋಟೆಯ ವಿಧಾನಪರಿಷತ್ತಿನ ಸದಸ್ಯರು ಕೂತಾಗಿತ್ತು. ನಿಧಾನಕ್ಕೆ ಅವರ ಜೊತೆ ಪರಿಚಯ ಬೆಳೆದು, ಅದೂ ಇದೂ ಅಂತ ...