ಭಾರತ, ಮಾರ್ಚ್ 4 -- ಸಲ್ಮಾನ್ ಖಾನ್‌ ನಟನೆಯ ಮುಂದಿನ ಸಿಕಂದರ್‌ ಸಿನಿಮಾದ ಮೊದಲ ಹಾಡಿನ ಟೀಸರ್ ಬಿಡುಗಡೆಯಾಗಿದೆ. ಈದ್ ಹಬ್ಬಕ್ಕೆ ಈ ಹಾಡು ಉಡುಗೊರೆ ಎಂದು ಹೇಳಲಾಗುತ್ತಿದೆ. ಇದೊಂದು ಹೈ ಏನರ್ಜಿ ಹಾಡಾಗಿದ್ದು ಸಲ್ಮಾನ್ ಜೊತೆ ಹೆಜ್ಜೆ ಹಾಕಿದ್ದಾರೆ ರಶ್ಮಿಕಾ ಮಂದಣ್ಣ. ಈ ಜೋಡಿ ಮೊದಲ ಬಾರಿಗೆ ಒಂದಾಗಿ ತೆರೆ ಮೇಲೆ ಕಾಣಿಸುತ್ತಿದ್ದು, ಜೋಹ್ರಾ ಜಬೀನ್ ಹಾಡು ಈದ್‌ ಅಂಥೆಮ್‌ ಸಾಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ. ಪ್ರೀತಮ್ ಸಂಗೀತ ಸಂಯೋಜಿಸಿರುವ ಹಾಡಿಗೆ, ಫರಾ ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಈ ಹಾಡಿನ ಟೀಸರ್‌ ಅದ್ಭುತ ದೃಶ್ಯಗಳನ್ನು ಒಳಗೊಂಡಿದೆ. ಫರಾ ಖಾನ್ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಹಾಡಿನಲ್ಲಿ ಹಬ್ಬದ ವಾತಾವರಣವಿದೆ. ಸಲ್ಮಾನ್ ಹಾಗೂ ರಶ್ಮಿಕಾ ಇದರಲ್ಲಿ ವಿಭಿನ್ನ ವೇಷಭೂಷಣ ತೊಟ್ಟು ಡಾನ್ಸ್ ಮಾಡಿರುವ ಸುಳಿವು ಸಿಗುತ್ತದೆ. ಇದು ಹಬ್ಬದ ಆಚರಣೆಯನ್ನು ಪ್ರತಿನಿಧಿಸುವ ಹಾಡಾಗಿರಬಹುದು ಎಂದು ಟೀಸರ್‌ ನೋಡಿದ್ರೆ ಅನ್ನಿಸುತ್ತದೆ. ನಕಾಶ್ ಅಜೀಜ್ ಮತ್ತು ದೇವ್ ನೇಗಿ ಅವರ ಗಾಯನ, ಸಮೀರ್ ಮತ್ತು ಡ್ಯಾನಿಶ್ ಸಬ್ರ...