ಭಾರತ, ಮಾರ್ಚ್ 31 -- ಸಿಕಂದರ್‌ ಸಿನಿಮಾ ವಿಮರ್ಶೆ: ಸಿಕಂದರ್‌ ಸಿನಿಮಾ ಕಳೆದ ಹಲವು ದಿನಗಳಿಂದ ಸೃಷ್ಟಿಸಿದ ಹೈಪ್‌ ಅಷ್ಟಿಷ್ಟಲ್ಲ. ಈದ್‌ ಸಮಯದಲ್ಲಿ ಬಿಡುಗಡೆಯಾದ ಸಿಕಂದರ್‌ ಸಿನಿಮಾ ಹಸಿದ ಪ್ರೇಕ್ಷಕರಿಗೆ ಮೃಷ್ಟಾನ್ನ ವಾಗಬೇಕಿತ್ತು. ಆದರೆ, ತನ್ನ ಅಭಿಮಾನಿಗಳಿಗೆ ಹಳಸಿದ ಅನ್ನವನ್ನು ಬಡಿಸಿದ್ದಾರೆ ಸಲ್ಮಾನ್‌ ಖಾನ್‌. ಭಜರಂಗಿ ಭಾಯಿಜಾನ್‌ ಸಿನಿಮಾದಲ್ಲಿ ಕಬೀರ್‌ ಖಾನ್‌ ನಂತರ ಪ್ರತಿಯೊಬ್ಬ ನಿರ್ದೇಶಕರು ನಟನ ಮಿತಿಗಳನ್ನು ಮೀರಿ ಕೆಲಸ ಮಾಡಬೇಕಾಯಿತು. ಸ್ಟಾರ್‌ ನಟನ ವಿಜ್ರಂಭಿಸಲು ವಿಫಲ ಪ್ರಯತ್ನ ಮಾಡಬೇಕಾಯಿತು. ಇದು ಕೇವಲ ಸಿಕಂದರ್‌ ಕುರಿತಾದ ಅಭಿಪ್ರಾಯವಲ್ಲ. ಸಲ್ಮಾನ್‌ ಖಾನ್‌ ನಟನೆಯ ಈ ಹಿಂದಿನ ಮೂರು ಸಿನಿಮಾಗಳಾದ ರಾಧೆ, ಕಿಸಿ ಕಾ ಭಾಯಿ ಕಿಸಿ ಕಿ ಜಾನ್‌ ಮತ್ತು ಟೈಗರ್‌ 3 ಸಿನಿಮಾಗಳ ವಿಮರ್ಶೆಯೂ ಹೌದು. ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಕೂಡ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಯಾಗಿಸಿದ ಚಿತ್ರ.

ಸಂಜಯ್‌ ರಾಜಕೋಟ್‌ (ಸಲ್ಮಾನ್‌ ಖಾನ್‌) ವಿಮಾನದಲ್ಲಿ ಸಂಚರಿಸುವಾಗ ಅಲ್ಲಿ ರಾಜಕಾರಣಿಯ ಮಗನೊಬ್ಬ ಮಹಿಳೆಯ ಜತೆ ಅನುಚಿತ...