ಭಾರತ, ಮೇ 24 -- ಸಿಕಂದರ್‌ ಸಿನಿಮಾ ಒಟಿಟಿ ರಿಲೀಸ್‌: ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ಮಾರ್ಚ್ 30, 2025 ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿದೆ. ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಒಂದು ತಿಂಗಳಾಗುವ ಮುನ್ನವೇ ಒಟಿಟಿಯತ್ತ ಮುಖ ಮಾಡುತ್ತಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಆಕ್ಷನ್ ನಾಟಕವು ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು. ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಈ ಚಿತ್ರ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಸಿಕಂದರ್‌ ಸಿನಿಮಾವು ಮೇ 25ರ ಮಧ್ಯರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಅಂದರೆ, ಮೇ 24 ಕಳೆದ ತಕ್ಷಣ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ನಾಳೆ ಹೇಗೋ ರಜೆ ಇಂದೇ ರಾತ್ರಿ ನೋಡೋಣ ಎಂದು ಕಾಯುವವರು ನಿದ್ದೆಗಣ್ಣಲ್ಲಿಈ ಸಿನಿಮಾ ನೋಡಬಹುದು. ನಾಳೆ ಭಾನುವಾರ ಹೊರಗೆಲ್ಲ ಮಳೆ ಅಥವಾ ಬಿಸಿಲು ಇರುತ್ತದೆ, ಮನೆಯಲ್ಲೇ ಇರೋಣ ಎಂದು ಪ್ಲ್ಯಾನ್‌ ಮಾಡಿದ್ದವರು ಕೂಡ ಮನೆಯಲ್ಲಿಯೇ ಈ ಸಿನಿಮಾವನ್ನು ಒಟಿಟಿಯಲ್...