ಭಾರತ, ಏಪ್ರಿಲ್ 2 -- Sikandar box office collection day 3: ಸಲ್ಮಾನ್ ಖಾನ್ ನಟನೆಯ ಆಕ್ಷನ್-ಥ್ರಿಲ್ಲರ್ ಸಿಕಂದರ್ ಸಿನಿಮಾ ಮಾರ್ಚ್ 30, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದ ಕುರಿತು ಮೊದಲ ದಿನದಿಂದಲೇ ನಕಾರಾತ್ಮಕ ವಿಮರ್ಶೆಗಳು ಬಂದಿವೆ. ಸಿನಿಮಾ ನೋಡಿದವರು "ಚೂರು ಚೆನ್ನಾಗಿಲ್ಲ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಎರಡನೇ ದಿನ ಈದ್‌ ಹಬ್ಬದ ಕಾರಣದಿಂದ ಈ ಚಿತ್ರದ ಗಳಿಕೆ ತುಸು ಏರಿಕೆ ಕಂಡಿತ್ತು. ಮೂರನೇ ದಿನ ಬಾಕ್ಸ್‌ ಆಫೀಸ್‌ ಗಳಿಕೆ ಸ್ಥಿರವಾಗಿದೆ. ಆದರೆ, ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ಹೆಚ್ಚಿಸಲು ಹೆಣಗಾಡುತ್ತಿದೆ.

ಸಕ್ನಿಲ್ಕ್.ಕಾಂ ಪ್ರಕಾರ ಸಿಕಂದರ್ ಬಿಡುಗಡೆಯಾದ ಬಳಿಕ 2ನೇ ದಿನದಂದು 29 ಕೋಟಿ ರೂಪಾಯಿ ಸಂಗ್ರಹಿಸಿದೆ. ಮೊದಲ ಮಂಗಳವಾರ (3 ನೇ ದಿನ) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 17.81 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್‌ 72.81 ಕೋಟಿ ರೂಗೆ ತಲುಪಿದೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸಿಕಂದರ್‌ ಗಳಿಕೆ 95 ಕೋಟಿ ರೂಗೆ ತಲುಪಿದೆ. ಈ ...