ಭಾರತ, ಮಾರ್ಚ್ 28 -- ನವದೆಹಲಿ: ಸಿಎ ಮುಗಿಸಬೇಕು ಎನ್ನುವುದು ಹಲವು ಬಿಕಾಂ, ಬಿಬಿಎಂ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ ಸಿಎ ಪರೀಕ್ಷೆ ಪಾಸ್ ಆಗುವುದು ಖಂಡಿತ ಸುಲಭದ ಮಾತಲ್ಲ. ಇದಕ್ಕಾಗಿ ಹಗಲು, ರಾತ್ರಿ ಕಷ್ಟಪಟ್ಟು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಅಭ್ಯಾಸ ಮಾಡಬೇಕಾಗುತ್ತದೆ. ನೀವು ಸಿಎ ಆಕಾಂಕ್ಷಿಯಾಗಿದ್ದರೆ ನಿಮಗಾಗಿ ಇಲ್ಲೊಂದು ಶುಭಸುದ್ದಿ ಇದೆ. ಇಷ್ಟು ದಿನ ವರ್ಷಕ್ಕೆ 2 ಬಾರಿ ನಡೆಯುತ್ತಿದ್ದ ಸಿಎ ಅಂತಿಮ ಹಂತದ ಪರೀಕ್ಷೆ ಇದನ್ನು ಮುಂದೆ 3 ಬಾರಿ ನಡೆಯಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಜಾಗತಿಕ ವ್ಯವಸ್ಥೆಯ ಜತೆ ಸಾಗುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ಇನ್ನು ಮುಂದೆ ವರ್ಷಕ್ಕೆ ಮೂರು ಬಾರಿ ಸಿಎ ಅಂತಿಮ ಹಂತದ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ಮೊದಲು ಸಿಎ ಅಂತಿಮ ಹಂತದ ಪರೀಕ್ಷೆ ವರ್ಷಕ್ಕೆ ಎರಡು ಬಾರಿ ಮಾತ್ರ ನಡೆಯುತ್ತಿತ್ತು.

ಕಳೆದ ವರ್ಷ ಐಸಿಎಐ ಇಂಟರ್‌ಮೀಡಿಯೇಟ್‌ ಹ...