ಭಾರತ, ಮಾರ್ಚ್ 28 -- ಐಪಿಎಲ್‌ 2025ರ ಆವೃತ್ತಿಯಲ್ಲಿ ಇಂದು ಬಲುರೋಚಕ ಪಂದ್ಯ ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸವಾಲು ಹಾಕುತ್ತಿದೆ. ಹೈವೋಲ್ಟೇಜ್‌ ಪಂದ್ಯಕ್ಕೆ ಚೆನ್ನೈನ ಚೆಪಾಕ್‌ ಮೈದಾನ ಸಜ್ಜಾಗಿದ್ದು, ಅಭಿಮಾನಿಗಳು ಕ್ಷಣಗಣನೆ ಮಾಡುತ್ತಾ ಕುಳಿತಿದ್ದಾರೆ. ಉಭಯ ತಂಡಗಳು ಐಪಿಎಲ್‌ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದೆ. 5 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಸಿಎಸ್‌ಕೆ, ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು. ಆದರೆ, ಒಮ್ಮೆಯೂ ಕಪ್‌ ಗೆಲ್ಲದಿದ್ದರೂ ಆರ್‌ಸಿಬಿ ತಂಡ ಕೂಡಾ ದೊಡ್ಡ ಪ್ರಮಾಣದ ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿದೆ.

ಉಭಯ ತಂಡಗಳ ಪಂದ್ಯ ಸಮೀಪಿಸುತ್ತಿದ್ದಾಗ ಸೋಷಿಯಲ್‌ ಮೀಡಿಯಾದಲ್ಲೂ ದೊಡ್ಡ ಮಟ್ಟದ ಫ್ಯಾನ್‌ವಾರ್‌ ನಡೆಯುವುದು ಸಾಮಾನ್ಯ. ಈ ಬಾರಿಯೂ ಅಭಿಮಾನಿಗಳ ನಡುವೆ ಟ್ರೋಲ್‌ಗಳು, ನಮ್ಮ ತಂಡವೇ ಗ್ರೇಟ್‌ ಎಂಬ ವಾದಗಳು ಸಾಗುತ್ತಿವೆ. ಹಾಗಿದ್ದರೆ ನಿಜಕ್ಕೂ ಯಾವ ತಂಡದ ಅಭಿಮಾನಿಗಳು ಹೆಚ್ಚಿದ್ದಾರೆ ಎಂಬುದನ್ನ...