ಭಾರತ, ಮಾರ್ಚ್ 29 -- ಸಿಎಸ್‌ಕೆ ತಂಡವನ್ನು ಅದರದ್ದೇ ನೆಲದಲ್ಲಿ ಬಗ್ಗುಬಡಿದ ಆರ್‌ಸಿಬಿ ತಂಡ, ಐಪಿಎಲ್ 2025ರ ಆವೃತ್ತಿಯಲ್ಲಿ ಸತತ ಎರಡು ಜಯ ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ತಂಡವು, ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿಗೆ ಎದುರು ನೋಡುತ್ತಿದೆ. ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ, ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಸುಲಭ ಜಯ ಸಾಧಿಸಿತ್ತು. ಹಾಲಿ ಚಾಂಪಿಯನ್ ವಿರುದ್ಧ ಗೆಲುವಿನ ಬಳಿಕ ಮಾಜಿ ಚಾಂಪಿಯನ್ ಸಿಎಸ್‌ಕೆ ವಿರುದ್ಧದ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಲಿದೆ. ರಜತ್ ಪಾಟೀದಾರ್ ನಾಯಕತ್ವದಲ್ಲಿ ತಂಡಕ್ಕೆ ಸತತ ಯಶಸ್ಸು ಸಿಕ್ಕಿರುವುದು ಖುಷಿ ತಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡೂ ಪಂದ್ಯಗಳನ್ನು ತವರಿನ ಹೊರಗೆ ಆಡಿದೆ. ಇದೀಗ ಮೊದಲ ಬಾರಿಗೆ ತನ್ನ ತವರು ಮೈದಾನವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನಕ್ಕೆ ಆಡಲು ಬರುತ್ತಿದೆ. ತವರು ನೆಲದಲ್ಲಿ ದುಪ್ಪಟ್ಟು ಜೋಶ್‌ನೊಂದಿಗೆ ತವರಿನ ಅಭಿಮಾನಿಗಳ ಖುಷಿ ಹೆ...
Click here to read full article from source
To read the full article or to get the complete feed from this publication, please
Contact Us.