ಭಾರತ, ಮಾರ್ಚ್ 23 -- ಪ್ರತಿ ಬಾರಿಯ ಐಪಿಎಲ್‌ ಸಮಯದಲ್ಲೂ, ಸಿಎಸ್‌ಕೆ ತಂಡ ಹಾಗೂ ಎಂಎಸ್‌ ಧೋನಿ ಅಭಿಮಾನಿಗಳ ಪ್ರಶ್ನೆ ಒಂದೇ. ಎಂಎಸ್ ಧೋನಿ ಈ ಆವೃತ್ತಿ ಬಳಿಕ ವಿದಾಯ ಹೇಳುತ್ತಾರೋ ಏನೋ ಎಂಬ ಗೊಂದಲ ಅವರದ್ದು. ಹೀಗಾಗಿ ಪ್ರತಿ ಆವೃತ್ತಿಯಲ್ಲೂ ಸಿಎಸ್‌ಕೆ ತಂಡದ ಕೊನೆಯ ಪಂದ್ಯದ ಸಮಯದಲ್ಲಿ ಮಾಹಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸ್ಟೇಡಿಯಂನಲ್ಲಿ ಬಂದು ಸೇರುತ್ತಾರೆ. ಈ ಬಾರಿ ಚೆನ್ನೈ ಕ್ಯಾಂಪ್‌ ಸೇರುವ ಸಮಯದಲ್ಲಿ "ಒನ್ ಲಾಸ್ಟ್ ಟೈಮ್" ಎಂಬ ಪದಗಳಿರುವ ಟಿ-ಶರ್ಟ್ ಧರಿಸಿದ್ದ ಮಾಹಿ, ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟರು. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕೋಲಾಹಲವನ್ನು ಹುಟ್ಟುಹಾಕಿತು. ಆದರೆ, ಭಾನುವಾರ (ಮಾ.23) ಚೆನ್ನೈನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳ ನಡುವಿನ ಪಂದ್ಯಕ್ಕೆ ಮುಂಚಿತವಾಗಿ ನಿವೃತ್ತಿ ಕುರಿತ ಎಲ್ಲಾ ಊಹಾಪೋಹಗಳ ಬಗ್ಗೆ ಮಾಹಿ ಮೌನ ಮುರಿದಿದ್ದಾರೆ.

ಧೋನಿಗೆ ಈಗ 43 ವರ್ಷ ವಯಸ್ಸು. ಈಗಲೂ ಅವರ ಫಿಟ್‌ನೆಸ್‌ಗೆ ಸರಿಸಾಟಿ ಇಲ್ಲ. ಸಿಎಸ್‌ಕೆ ಪರ ಹಲವು ವರ್ಷಗಳ ಕ...