ಭಾರತ, ಏಪ್ರಿಲ್ 18 -- ಐಪಿಎಲ್‌ 18ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಹೊಸ ಆಟಗಾರನ ಸೇರ್ಪಡೆಯಾಗಿದೆ. ರನ್‌ ಗಳಿಸಲು ಪರದಾಡುತ್ತಿರುವ ತಂಡಕ್ಕೆ ಸ್ಫೋಟಕ ಬ್ಯಾಟರ್‌ ಕಮ್‌ಬ್ಯಾಕ್‌ ಮಾಡಿದ್ದು, ಎಂಎಸ್ ಧೋನಿ ಪಡೆಯ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ಭರವಸೆ ಸಿಕ್ಕಿದೆ. ಗಾಯಗೊಂಡ ಗುರ್ಜಪ್ನೀತ್ ಸಿಂಗ್ ಬದಲಿಗೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್‌, ಬೇಬಿ ಎಬಿ ಎಂದೇ ಕರೆಯಲ್ಪಡುವ ಡೆವಾಲ್ಡ್‌ ಬ್ರೆವಿಸ್ ಸೇರ್ಪಡೆಯಯಾಗಿದೆ. ಈ ಕುರಿತು ಐಪಿಎಲ್‌ ಹಾಗೂ ಸಿಎಸ್‌ಕೆ ಫ್ರಾಂಚೈಸಿ ಅಧಿಕೃತ ಹೇಳಿಕೆ ನೀಡಿದೆ. ಹೊಸ ಆಟಗಾರನ ಸೇರ್ಪಡೆಯಿಂದ ಸಿಎಸ್‌ಕೆ ತಂಡದ ಅದೃಷ್ಟ ಬದಲಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

"ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಗಾಯಗೊಂಡ ಗುರ್ಜಪ್ನೀತ್ ಸಿಂಗ್ ಬದಲಿಗೆ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಉಳಿದ ಭಾಗಕ್ಕೆ ಒಪ್ಪಂದ ಮಾಡಿಕೊಂಡಿದೆ" ಎಂದು ಐಪಿಎಲ್‌ ಪತ್ರಿಕಾ ಪ್ರಕಟಣೆ ದೃಢಪಡಿಸ...